ಹಾಸನ: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಏನೇ ಕಸರತ್ತು ಮಾಡಿದರೂ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ ಮುಳುಗುತ್ತಿರುವ ಹಡಗು. ಇಂತಹ ಸಂದರ್ಭದಲ್ಲಿ ಬಿಜೆಪಿ ಮಾತ್ರ ಸದೃಢ, ಸಮರ್ಥ ಸರ್ಕಾರ ನೀಡಲು ಸಾಧ್ಯ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಓದಿ... ಟೂಲ್ಕಿಟ್ ವಿಫಲವಾದಾಗ ತೇಜೋವಧೆಯೊಂದೇ ಕಾಂಗ್ರೆಸ್ನ ಕೊನೆಯ ಅಸ್ತ್ರ: ಬಿಜೆಪಿ ಗರಂ

ಮುಖ್ಯಮಂತ್ರಿ ಆಗಿದ್ದವರು, ಪ್ರಧಾನಿ ಆಗಿದ್ದವರು ಮಾಡದ ವಿಮಾನ ನಿಲ್ದಾಣ ಮಾಡಿದ್ದು ಪ್ರೀತಂ ಗೌಡ. ಹಾಸನ- ಚಿಕ್ಕಮಗಳೂರು ಹೆದ್ದಾರಿ ಚತುಷ್ಪಥವಾಗಲಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಸಿ.ಟಿ. ಹೇಳಿದರು.

ಅಭಿವೃದ್ಧಿ ವಿಷಯದಲ್ಲಿ ನಾವು ಜಾಗ್ವಾರ್ ಥರ ಕೆಲಸ ಮಾಡಿದ್ದೇವೆ. ಡಕೋಟ ಥರ ಅಲ್ಲ ಎಂದರು. ಒಂದು ಪಕ್ಷಕ್ಕೆ ನೀತಿ, ಸಿದ್ಧಾಂತ ಇರಬೇಕು. ದೇಶ ಮೊದಲು ನಮ್ಮ ತತ್ವ. ಅಧಿಕಾರ, ಕುಟುಂಬ ಮೊದಲು ಎಂಬುದಲ್ಲ. ಎಲ್ಲರ ಅಭಿವೃದ್ಧಿ ಎಂದರೆ ತಾತ, ಮುತ್ತಾತರ ಅಭಿವೃದ್ಧಿಯಲ್ಲ, ಬಡವ, ಶೋಷಿತರ ಅಭಿವೃದ್ಧಿ ನಮ್ಮ ನೀತಿ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಬಾರಿ ಶಾಸಕನಾಗಿ ಪ್ರೀತಂರನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿ ಸಚಿವರಾಗಲು ಅವರನ್ನು ಆಯ್ಕೆ ಮಾಡಬೇಕು ಎಂದರು.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ ಜೆಡಿ, ಎನ್ ಸಿಪಿಯಂತೆ ಕುಟುಂಬವೇ ನೇತಾರ ಆಗಿರುವ ಪಕ್ಷಗಳಂತೆ ರಾಜ್ಯದಲ್ಲಿಯೂ ಒಂದು ಪಕ್ಷವಿದೆ ಎಂದು ಜೆಡಿಎಸ್ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಇವನ್ನೂ ಓದಿ...

* ರೋಹಿಣಿ ವಿರುದ್ಧ ಡಿ ರೂಪಾ ಎತ್ತಿರುವ ಪ್ರಶ್ನೆಗಳು ಸರಿ ಇವೆ: ಪ್ರತಾಪ ಸಿಂಹ

* ಡಿ ರೂಪಾ, ರೋಹಿಣಿ ಸಿಂಧೂರಿಯನ್ನು ಹುದ್ದೆ ಸೂಚಿಸದೆ ವರ್ಗಾವಣೆ ಮಾಡಿದ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.