ಅರಸೀಕೆರೆ: ‘ಪಂಚಶೀಲ ತತ್ವಗಳ ಆದರ್ಶದೊಂದಿಗೆ ವಿಶ್ವಸಂಸ್ಥೆಯಲ್ಲಿ ನಮ್ಮದು ಜಾತ್ಯತೀತ ರಾಷ್ಟ್ರ ಎಂದು ನಾವು ಘೋಷಣೆ ಮಾಡಿಕೊಂಡಿದ್ದು, ಸ್ವಾರ್ಥ ಸಾಧನೆಗಾಗಿ ರಾಜಕಾರಣಿಗಳು ಪ್ರಸ್ತುತ ನಡೆದುಕೊಳ್ಳುತ್ತಿರುವ ರೀತಿ ನೀತಿಯಿಂದ ಮುಂದೆ ನಮ್ಮ ಅಖಂಡತೆಗೆ ಧಕ್ಕೆ ಉಂಟಾಗುವ ಅಪಾಯವಿದೆ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಜನಪ್ರತಿನಿಧಿಗಳ ಕರ್ತವ್ಯ ಅದನ್ನು ರಾಜಕಾರಣಿಗಳು ಮರೆಯಬಾರದು’ ಎಂದರು.

‘ಪ್ರಜ್ಞಾವಂತ ಸಮಾಜವಾಗಿರುವ ವಿಶ್ವಕರ್ಮರು ಪಾರಂಪರಿಕವಾಗಿ ತಮ್ಮ ಮೂಲ ಕಸುಬನ್ನು ಇಂದಿಗೂ ಮುಂದುವರಿಸುತ್ತಾ ಬಂದಿದ್ದು ನಿಮ್ಮ ಸಮಾಜದ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಈಗಾಗಲೇ ನಗರದ ಹೃದಯ ಭಾಗದಲ್ಲಿ ನಿಮಗೆ ಹೈಟೆಕ್ ಸಮುದಾಯ ಭವನ ನಿರ್ಮಿಸಿ ಕೊಟ್ಟಿದ್ದು ಈ ಸಮುದಾಯ ಭವನ ನಿರ್ಮಾಣಕ್ಕೆ ಇನ್ನೂ ಐದು ಲಕ್ಷಗಳ ಅವಶ್ಯಕತೆ ಇದೆ ಎಂದು ತಾವು ಮಾಡಿರುವ ಮನವಿಯನ್ನು ಪರಿಗಣಿಸಿ ಶೀಘ್ರದಲ್ಲಿ ₹ 5 ಲಕ್ಷ ನೀಡುವುದಾಗಿ’ ಭರವಸೆ ನೀಡಿದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ‘ಯುಗ ಯುಗಾಂತರದ ಇತಿಹಾಸ ಹೊಂದಿರುವ ವಿಶ್ವಕರ್ಮ ಸಮಾಜ ಪ್ರಸ್ತುತ ಸಾಗುತ್ತಿರುವ ನಾಗರಿಕ ಸಮಾಜದ ಬೆಳವಣಿಗೆಗೂ ಕೂಡ ಅಪಾರವಾದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ. ಯೋಗೀಶ ಆಚಾರ್ ಮಾತನಾಡಿ, ‘ಶಾಸಕ ಕೆಎಂ ಶಿವಲಿಂಗೇಗೌಡರ ಸಹಕಾರದಿಂದ ಹೈಟೆಕ್ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಸಮುದಾಯ ಭವನಕ್ಕೆ ಸಂಪರ್ಕ ಕಲ್ಪಿಸುವ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗದ ವೃತ್ತವನ್ನು ‘ವಿಶ್ವಕರ್ಮ ವೃತ್ತ’ ಎಂದು ನಾಮಕರಣ ಮಾಡುವಂತೆ’ ಶಾಸಕರಿಗೆ ಮನವಿ ಮಾಡಿದರು.

ಸಮಾರಂಭದಲ್ಲಿ ಗ್ರೇಡ್ –2 ತಹಶೀಲ್ದಾರ್ ಪಾಲಾಕ್ಷ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ತಾ.ಪಂ ಇಒ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಂ, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಆಚಾರ್, ಸಮಾಜದ ಮುಖಂಡರಾದ ತಿಮ್ಮಾಚಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.