ಹೊಳೆನರಸೀಪುರ: ಪಟ್ಟಣದಲ್ಲಿ 450 ಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿದ್ದು, ಇವರ ಗೋಳು ಹೇಳತೀರದಾಗಿದೆ.

ಈ ಮೊದಲು ತಾಲ್ಲೂಕು ಕಚೇರಿ ರಸ್ತೆ, ನಗರ ಠಾಣೆ ರಸ್ತೆ, ಸುಭಾಶ್ ವೃತ್ತ, ಗಾಂಧಿ ವೃತ್ತದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಕೆಲವು ವರ್ಷಗಳ ಹಿಂದೆ ಶಾಸಕ ಎಚ್.ಡಿ. ರೇವಣ್ಣ, ‘ಕೋಟೆ ಕವರ್ ಡಕ್’ ಮೇಲೆ ತರಕಾರಿ ಮಾರುಕಟ್ಟೆ ನಿರ್ಮಿಸಿ ಎಲ್ಲರನ್ನೂ ಅಲ್ಲಿಗೆ ಸ್ಥಳಾಂತರಿಸಿದ್ದರು.

ಈಗ ಮತ್ತೆ ತರಕಾರಿ, ಬಾಳೆಹಣ್ಣು, ಹಣ್ಣು, ತೆಂಗಿನಕಾಯಿ, ತರಕಾರಿ, ಸೌತೆ ಕಾಯಿ ಹೂವು ಸೇರಿದಂತೆ ಎಲ್ಲ ಬಗೆಯ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇವರೆಲ್ಲ ಕೋಟೆ ಮುಖ್ಯ ರಸ್ತೆ, ಗಾಂಧಿ ವೃತ್ತ, ಸುಭಾಷ್ ವೃತ್ತ, ಪೇಟೆ ಮುಖ್ಯರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಲು ಪ್ರಾರಂಭಿಸಿದ್ದಾರೆ. ತರಕಾರಿ ಮಾರುಕಟ್ಟೆ ಒಳಗೆ ವ್ಯಾಪಾರ ಇಲ್ಲದೇ ಅಲ್ಲಿನ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಮಾರುಕಟ್ಟೆ ಒಳಗೆ ವ್ಯಾಪಾರ ಇಲ್ಲದಂತಾಗಿದೆ. ಜೊತೆಗೆ ರಸ್ತೆಯಲ್ಲಿ ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದ್ದು, ಎಲ್ಲರನ್ನೂ ಕವರ್ ಡಕ್ ಮೇಲೆ ಕಳುಹಿಸಬೇಕು ಎಂದು ತರಕಾರಿ ವ್ಯಾಪಾರ ಮಾಡುವ ಪುರಸಭಾ ಸದಸ್ಯ ತರಕಾರಿ ಮಂಜು ಆಗ್ರಹಿಸಿದ್ದಾರೆ.

ಅರಕಲಗೂಡು ರಸ್ತೆಯಲ್ಲಿ ಸುಮಾರು 3.5 ಎಕರೆ ಪ್ರದೇಶದಲ್ಲಿ ಸುಮಾರು ₹4.5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ಕಟ್ಟಲಾಗಿದ್ದು, ಅಲ್ಲಿಗೆ ಎಲ್ಲ ಮಾರಾಟಗಾರರನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಆದರೆ, ವ್ಯಾಪಾರಿಗಳು ಅಲ್ಲಿಗೆ ಹೋಗಲು ಸಿದ್ದರಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದು, ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗಿರುದೆ. ಅಪಘಾತಕ್ಕೂ ಆಹ್ವಾನ ನೀಡುತ್ತಿದೆ ಎಂದು ಜನರು ದೂರುತ್ತಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯಲ್ಲಿ ಹೆಚ್ಚಳ ರಸ್ತೆ ಆವರಿಸುತ್ತಿರುವ ವ್ಯಾಪಾರಿಗಳು: ಸಂಚಾರಕ್ಕೆ ತೊಂದರೆ

ಎಲ್ಲರನ್ನೂ ರಸ್ತೆಗಳಲ್ಲಿ ಮಾರಾಟ ಮಾಡಲು ಬಿಟ್ಟು ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ.
ಪರಮೇಶ ತರಕಾರಿ ವ್ಯಾಪಾರಿ

ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗಕ್ಕೆ ₹44 ಲಕ್ಷ ಪಾವತಿಸಿದರೆ ಅದನ್ನು ನಮಗೆ ನೀಡಲಿದ್ದು ಎಲ್ಲ ರಸ್ತೆ ಬದಿ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು.
ನಾಗೇಂದ್ರಕುಮಾರ್ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.