ಹಾಸನ: ‘ಹಾಸನ ಹಾಲು ಒಕ್ಕೂಟದಲ್ಲಿ ₹122 ಕೋಟಿ ಮೌಲ್ಯದ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟವಾಗದೇ ಉಳಿದಿವೆ. ಹೀಗಾಗಿ ಹಾಲು ಉತ್ಪಾದಕರಿಗೆ ಮೂರು ವಾರಗಳ ಹಣ ನೀಡಲು ಸಾಧ್ಯವಾಗಿಲ್ಲ’ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಕ್ಕೂಟದಿಂದ ನಿತ್ಯ 4 ಲಕ್ಷದಿಂದ 4.5 ಲಕ್ಷ ಲೀಟರ್ ಹಾಲನ್ನು ಮೌಲ್ಯವರ್ಧನೆಗೆ ಕಳುಹಿಸಲಾಗುತ್ತಿದೆ. ಬೇಡಿಕೆ ಕಡಿಮೆಯಾಗಿದ್ದರಿಂದ 3,800 ಟನ್ ಹಾಲಿನ ಪೌಡರ್ ಹಾಗೂ 1,246 ಟನ್ ಬೆಣ್ಣೆ ಮಾರಾಟವಾಗದೇ ದಾಸ್ತಾನು ಉಳಿದಿದೆ’ ಎಂದರು.

‘ಉತ್ಪನ್ನಗಳು ಮಾರಾಟವಾಗದೇ ಒಕ್ಕೂಟವು ನಷ್ಟ ಅನುಭವಿಸುವಂತಾಗಿದೆ. ವಾರ್ಷಿಕವಾಗಿ ಒಕ್ಕೂಟದಿಂದ ಕೆಎಂಎಫ್‌ಗೆ ₹15 ಕೋಟಿ ತೆರಿಗೆ ಪಾವತಿಸಲಾಗುತ್ತಿದೆ. ಸದ್ಯಕ್ಕೆ ನಷ್ಟದಲ್ಲಿರುವುದರಿಂದ ಹಾಲಿನ ಉತ್ಪನ್ನಗಳ ಮಾರಾಟ ಮೇಲೆ ಕೆಎಂಎಫ್ ವಿಧಿಸುತ್ತಿರುವ ಶೇ 6 ರಷ್ಟು ಮಾರಾಟ ತೆರಿಗೆಯನ್ನು ಕೆಲ ತಿಂಗಳು ಕೈಬಿಡುವಂತೆ ಕೆಎಂಎಫ್‌ಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.