ಅರಕಲಗೂಡು: ತಾಲ್ಲೂಕಿನ ಕಾಕೋಡನಹಳ್ಳಿಯಲ್ಲಿ ಶುಕ್ರವಾರ ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಪಶು ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಕರುವನ್ನು ಸುರಕ್ಷಿತವಾಗಿ ಹೊರತೆಗೆದಿದೆ.

ಗ್ರಾಮದ ರವಿಕುಮಾರ್ ಅವರ ಎಚ್.ಎಫ್ ತಳಿಯ 3 ವರ್ಷ ಹಸು ಪೂರ್ಣ ಗರ್ಭ ಧರಿಸಿದ್ದರೂ ಕರು ಹಾಕಲು ಸಾಧ್ಯವಾಗಿರಲಿಲ್ಲ. ಹಸುವನ್ನು ಪರೀಕ್ಷಿಸಿದ ಎಬಿಎಂ ಹಳ್ಳಿ ಪಶು ವೈದ್ಯಾಧಿಕಾರಿ ಡಾ. ಚೇತನ್ ಕುಮಾರ್ ಸಹಜ ಪ್ರಸವ ನಡೆಸಲು ಮಾಡಿದ ಪ್ರಯತ್ನ ಫಲಿಸಲಿಲ್ಲ. ಪೂರ್ಣ ಪ್ರಮಾಣದಲ್ಲಿ ಗರ್ಭಕೋಶ ತೆರೆಯದ ಕಾರಣ ಕರು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ವಿಜಾಪುರ ಅರಣ್ಯ ಗ್ರಾಮದ ಪಶು ವೈದ್ಯಾಧಿಕಾರಿ ಡಾ. ಪವನ್ ನೆರವು ಪಡೆದು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೆಣ್ಣು ಕರುವನ್ನು ಹೊರತೆಗೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.