ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಲ: ತುಂಗಭದ್ರಾ ನದಿ ಅಬ್ಬರಕ್ಕೆ ಜನ ತತ್ತರ

Published 21 ಜುಲೈ 2024, 15:20 IST
Last Updated 21 ಜುಲೈ 2024, 15:20 IST
ಅಕ್ಷರ ಗಾತ್ರ

ಗುತ್ತಲ: ಹಾವೇರಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಾದ ಕಂಚಾರಗಟ್ಟಿ, ಹರಳಹಳ್ಳಿ, ಹಾವನೂರ, ಹುರುಳಿಹಾಳ ಗಳಗನಾಥ, ಮೇವುಂಡಿ, ತೆರೆದಹಳ್ಳಿ ಸೇರಿದಂತೆ ತುಂಗಭದ್ರಾ ನದಿ ದಡದಲ್ಲಿರುವ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಸಂಪೂರ್ಣ ನಾಶವಾಗುವ ಹಂತ ತಲುಪಿವೆ.

ಭತ್ತ, ಕಬ್ಬು, ಗೋವಿನ ಜೋಳ, ಶೇಂಗಾ ಸೇರಿದಂತೆ ಇನ್ನೂ ಹಲವಾರು ಬೆಳೆಗಳು ತುಂಗಭದ್ರ ಹಿನ್ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿವೆ. ತುಂಗಭದ್ರ ನದಿಗೆ ಇದೇ ಪ್ರಮಾಣದ ನೀರು ಇನ್ನು ಹರಿದು ಬಂದರೆ ಗ್ರಾಮಗಳಿಗೆ ನೀರು ನುಗ್ಗುವ ಭೀತಿಯಲ್ಲಿ ಕಾಲ ಕಳೆಯುವಂತೆ ಆಗಿದೆ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆಗಳನ್ನು ಕಳೆದುಕೊಳ್ಳಲು ಜನರು ತತ್ತರಿಸುತ್ತಿದ್ದಾರೆ. ಭಾನುವಾರ ಬೆಳಗಿನ ಜಾವದಿಂದ ತುಂಗಭದ್ರ ನದಿಯ ಪ್ರವಾಹ ತಗ್ಗುವ ಲಕ್ಷಣ ಕಾಣುತ್ತಿದೆ’ ಎಂದು ರೈತರು ಹೇಳುತ್ತಾರೆ.

ಗುತ್ತಲ ಸಮೀಪದ ಹಾವನೂರ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿರುವ ತುಂಗಭದ್ರಾ ನದಿ
ಗುತ್ತಲ ಸಮೀಪದ ಹಾವನೂರ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿರುವ ತುಂಗಭದ್ರಾ ನದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT