ಹಾವೇರಿ: ‘ಕನ್ನಡದ ಮೊದಲ ಕವಯತ್ರಿಯಾಗಿ, ವಚನಕಾರ್ತಿಯಾಗಿ, ಇಡೀ ಮಹಿಳಾ ಸಂಕುಲಕ್ಕೆ ಸ್ವಾಭಿಮಾನದ ಕೀರ್ತಿಯ ಕಲಶವಿಟ್ಟವರು ಅಕ್ಕಮಹಾದೇವಿ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ಏರ್ಪಡಿಸಿದ್ದಅಕ್ಕಮಹಾದೇವಿ ಜಯಂತಿ, ಹನುಮ ಜಯಂತಿ ಹಾಗೂ ಹುಕ್ಕೇರಿಮಠದ ಅಕ್ಕನ ಬಳಗದ 83ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರ. ಕನ್ನಡದ ಮೂಲಕ ವಚನ ರಚನೆ ಮಾಡಿ ವಿಶ್ವ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದವರಲ್ಲಿ ಅಕ್ಕಮಹಾದೇವಿ ವಚನಗಳ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.

ಪ್ರಾರಂಭದಲ್ಲಿ ಅಕ್ಕನ ವಚನ ಪ್ರಾರ್ಥನೆ, ಶಿವಾನುಭವ, ತೊಟ್ಟಿಲೋತ್ಸವ, ಅಕ್ಕನ ಮೂರ್ತಿಗೆ ಅರ್ಚನೆ ನಡೆಯಿತು. ಅಕ್ಕನಬಳಗದ ತಾಯಂದಿರಾದ ಚಂಪಾ ಹುಣಸಿಕಟ್ಟಿ, ಗಿರಿಜಾ ಮುಷ್ಠಿ, ಶಿವಲೀಲಾ ತಟಪಟ್ಟಿ, ವನಿತಾ ಮಾಗನೂರ ಹಾಗೂ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಸ್.ಎಸ್. ಮುಷ್ಠಿ, ಸಹ ಕಾರ್ಯದರ್ಶಿ ಎನ್.ಬಿ.ತಾಂಡೂರ, ಸದಸ್ಯರಾದ ಜಿ.ಕೆ.ಹೂಗಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.