ಶಿಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರದ ಕಣಕ್ಕೆ ಇಳಿದಿದ್ದು, ಹುಲಗೂರು, ಹುರುಳಿಕುಪ್ಪಿ ಹಾಗೂ ಬಂಕಾಪುರದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದ ಸಿದ್ದರಾಮಯ್ಯ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಖಾಸಗಿ ಕಾರಿನಲ್ಲಿ (ಕೆಎ 18 ಎಂ.ಕೆ 4599) ಶಿಗ್ಗಾವಿ ಕ್ಷೇತ್ರವನ್ನು ಪ್ರವೇಶಿಸಿದರು. ಮುಖಂಡ ಸೈಯದ್ ಅಜ್ಜಂಪೀರ ಖಾದ್ರಿ ಅವರ ಊರಾದ ಹುಲಗೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದ ಆಕಾಂಕ್ಷಿಗಳು ಸಹ ವೇದಿಕೆಯಲ್ಲಿ ಹಾಜರಿದ್ದರು. ಎಲ್ಲರನ್ನೂ ಕುರಿತು ಮಾತನಾಡಿದ ಮುಖ್ಯಮಂತ್ರಿ, ‘ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕೆಂದು ನಿರ್ಧರಿಸಿ, ಪಠಾಣನನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈತನನ್ನು ಗೆಲ್ಲಿಸಲು ಖಾದ್ರಿ ಪಣ ತೊಟ್ಟಿದ್ದಾರೆ’ ಎಂದು ಹೇಳಿದರು.

ಕ್ಷೇತ್ರ ಬಿಡಲು ಸಿದ್ಧವಾಗಿದ್ದ ಖಾದ್ರಿ: ‘ಖಾದ್ರಿ ಹಾಗೂ ನಾನು ಜನತಾದಳದಲ್ಲಿ ಇದ್ದೆವು. 1994ರಲ್ಲಿ ಖಾದ್ರಿ ಶಿಗ್ಗಾವಿ ಶಾಸಕರಾಗಿ ಆಯ್ಕೆಯಾದರೆ. ಆಗ, ನಾನು ಸೋತಿದ್ದೆ. ‘ನನ್ನ ಕ್ಷೇತ್ರವನ್ನೇ ಬಿಟ್ಟು ಕೊಡುತ್ತೇನೆ. ಬಂದು ಚುನಾವಣೆಗೆ ನಿಲ್ಲಿ’ ಎಂದು ಖಾದ್ರಿ ಹೇಳಿದ್ದರು. ನಾನು ಬೇಡ ಎಂದೆ. ಜನರು ನಿನ್ನನ್ನು ಗೆಲ್ಲಿಸಿದ್ದಾರೆ. ಹೋಗಿ, ಜನರ ಸೇವೆ ಮಾಡು ಎಂದಿದ್ದೆ’ ಎಂಬುದಾಗಿ ಸಿದ್ದರಾಮಯ್ಯ ಹಳೇ ಘಟನೆಗಳನ್ನು ಮೆಲುಕು ಹಾಕಿದರು.

‘ಖಾದ್ರಿ, ಜನಪ್ರಿಯ ವ್ಯಕ್ತಿ. ಹಜರತ್ ಶಾ ದರ್ಗಾದ ಗುರು ಸಹ ಹೌದು. ಈ ದರ್ಗಾಗೆ ಮುಸ್ಲಿಂ ಮಾತ್ರವಲ್ಲದೇ ಎಲ್ಲ ಧರ್ಮದವರು ನಡೆದುಕೊಳ್ಳುತ್ತಾರೆ. ಎಲ್ಲ ಧರ್ಮದವರಿಗೆ ಖಾದ್ರಿ ಬೇಕು. ಕುರುಬ ಜಾತಿಯವರಿಗೂ ಅವರು ಬೇಕಾದವರು’ ಎಂದು ಹೇಳಿದರು.

ಸಚಿವರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಎಚ್.ಕೆ. ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.

ಖಾದ್ರಿ ಮನೆಯಲ್ಲಿ ಊಟ: ಹುಲಗೂರು ಕಾರ್ಯಕ್ರಮದ ನಂತರ ಖಾದ್ರಿ ಅವರ ಮನೆಯಲ್ಲಿ ಸಿದ್ದರಾಮಯ್ಯ ಅವರು ಊಟ ಮಾಡಿದರು. ಅವರಿಗೆ ಇಷ್ಟವಾದ ಮಟನ್ ಹಾಗೂ ಚಿಕನ್ ಅಡುಗೆ ಮಾಡಲಾಗಿತ್ತು. ಇದರ ಜೊತೆಯಲ್ಲಿಯೇ, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಖಾದ್ರಿ ಮನೆ ಆವರಣದಲ್ಲಿ ಬಿರಿಯಾನಿ–ಪಲಾವ್ ಬಡಿಸಲಾಯಿತು.

‘ಪಠಾಣ ಎಂಬುದಷ್ಟೇ ಗೊತ್ತಿತ್ತು‘

‘ಕಾಂಗ್ರೆಸ್ ಅಭ್ಯರ್ಥಿ ಹೆಸರು ಪಠಾಣ ಎಂಬುದಷ್ಟೇ ಗೊತ್ತಿತ್ತು. ಈಗ ಯಾಸೀರ ಖಾನ್ ಪಠಾಣ ಎಂಬುದು ಗೊತ್ತಾಯಿತು. ಈತ ಫೈಲ್ವಾನ್ ಪಠಾಣ’ ಎಂದು ಸಿದ್ದರಾಮಯ್ಯ ತಿಳಿಸಿದರು. ‘ಮುಖ್ಯಮಂತ್ರಿ ಮಗನ ವಿರುದ್ಧ ಗೆದ್ದು ಬರಬೇಕು. ಗೆದ್ದ ನಂತರ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಜೊತೆ ಮಾತಿನ ಕುಸ್ತಿ ಮಾಡಬೇಕು’ ಎಂದು ಪಠಾಣಗೆ ಕಿವಿಮಾತು ಹೇಳಿದರು. ‘ಸಾರ್ವತ್ರಿಕ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿಲ್ಲವೆಂದು ಪಠಾಣ ಬೇಸರಗೊಂಡಿದ್ದರು. ನನಗೂ ಬರಲು ಆಗಿರಲಿಲ್ಲ. ಪಠಾಣಗೆ ನೋವು ಆಗಿತ್ತು. ಈ ಬಾರಿ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದೆ. ಬಂದಿದ್ದೇನೆ. ಕ್ಷೇತ್ರದಲ್ಲಿ ಇದ್ದುಕೊಂಡು ಪ್ರಚಾರದಲ್ಲಿ ಭಾಗವಹಿಸುತ್ತೇನೆ’ ಎಂದರು.

‘ಮೋದಿಯದ್ದು ₹ 15 ಲಕ್ಷ ಬಂತಾ ?’

‘ಕಪ್ಪು ಹಣ ವಾಪಸು ತರುತ್ತೇನೆ ಹಾಗೂ ಅಚ್ಛೆ ದಿನ ಬರುತ್ತದೆ ಎಂದು ಹೇಳಿಕೊಂಡು ನರೇಂದ್ರ ಮೋದಿ ಅವರು 11ನೇ ವರ್ಷ ಆಡಳಿತ ನಡೆಸುತ್ತಿದ್ದಾರೆ. ನಿಮಗೇನಾದರೂ ₹ 15 ಲಕ್ಷ ಬಂದಿದೆಯಾ ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯಾ’ ಎಂದು ಸಿದ್ದರಾಮಯ್ಯ ಅವರು ಜನರನ್ನು ಪ್ರಶ್ನಿಸಿದರು. ‘ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದು ಮೋದಿ ಹೇಳುತ್ತಾರೆ. ಕೇಂದ್ರದಲ್ಲಿ ಮನಮೋಹನ ಸಿಂಗ್ ಸರ್ಕಾರವಿದ್ದಾಗ ದೇಶದ ಸಾಲ ₹ 54 ಲಕ್ಷ ಕೋಟಿಯಿತ್ತು. ಈಗ ₹ 185.05 ಲಕ್ಷ ಕೋಟಿ ಆಗಿದೆ. ಇದು ದಿವಾಳಿ ಅಲ್ಲವೇ ಮೋದಿಜಿ?’ ಎಂದು ವ್ಯಂಗ್ಯವಾಡಿದರು.

‘ಸವಾಲು ಸ್ವೀಕರಿಸದ ಬೊಮ್ಮಾಯಿ’

ಶಿಗ್ಗಾವಿ: ‘ನಮ್ಮ ಸರ್ಕಾರದ ಅವಧಿಯಲ್ಲಾದ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದ್ದೇನೆ. ಆದರೆ ಅವರು ಇದುವರೆಗೂ ಸವಾಲು ಸ್ವೀಕರಿಸಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ಬಂಕಾಪುರದಲ್ಲಿ ಮಾತನಾಡಿದ ಅವರು ‘ರಾಜ್ಯದ ಬಡವರು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಮಾನಿಸುತ್ತಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು. ‘ಷಡ್ಯಂತ್ರದ ಮೂಲಕ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಲು ರಾಜ್ಯಪಾಲರನ್ನು ಎತ್ತಿ ಕಟ್ಟಿದರು. ಜಾರಿ ನಿರ್ದೇಶನಾಲಯ (ಇ.ಡಿ) ಮೂಲಕವೂ ನನಗೆ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿಯ ಷಡ್ಯಂತ್ರ ಕುತಂತ್ರ ಮತ್ತು ರಾಜ್ಯದ ಜನರನ್ನು ವಿಭಜಿಸುವ ಅನಾಗರಿಕ ರಾಜಕಾರಣವನ್ನು ನೀವೆಲ್ಲರೂ ಸೋಲಿಸಬೇಕು’ ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.