ಬ್ಯಾಡಗಿ: ಪಟ್ಟಣದ ಎಸ್ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ನ.14 ರಿಂದ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳಿಂದ ಆಧ್ಯಾತ್ಮ ಪ್ರವಚನ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಸದ್ಭಾವನಾ ಪಾದಯಾತ್ರೆ ನಡೆಯುತ್ತಿದೆ.

ಪಟ್ಟಣದ ವಿವಿಧ ಬಡಾವಣೆಗಳು ಸ್ವಚ್ಛತೆಯಿಂದ ಕಂಗೊಳಿಸುತ್ತಿವೆ. ಕೊಪ್ಪಳದ ಗವಿಸಿದ್ದೇಶ್ವರ ಶ್ರೀ ಆರಂಭಿಸಿದ ಪಾದಯಾತ್ರೆ ಮೂರನೇ ದಿನಕ್ಕೆ ತಲುಪಿದ್ದು, ಶನಿವಾರ ಸ್ವಾತಂತ್ರ್ಯಯೋಧರ ಭವನದಿಂದ ಆರಂಭಗೊಂಡು ಸುಭಾಸ ನಗರ, ಸ್ಟೇಶನ್ ರಸ್ತೆ, ನೆಹರೂ ನಗರದ ದಾನಮ್ಮದೇವಿ ದೇವಸ್ಥಾನದವರೆಗೂ ಸಾಗಿತು.

ದಾರಿಯುದ್ದಕ್ಕೂ ಶ್ರೀಗಳಿಗೆ ಭವ್ಯ ಸ್ವಾಗತ ನೀಡಲಾಯಿತು. ರಾತ್ರಿಯಿಡಿ ಬಡಾವಣೆಯ ಮಹಿಳೆಯರು ಮನೆಯಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಶ್ರೀಗಳಿಗಾಗಿ ಆರತಿ ಹಿಡಿದು ಸ್ವಾಗತಿಸುತ್ತಿರುವುದು ಕಂಡು ಬಂದಿತು. ನೆಹರೂ ನಗರದಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಶ್ರೀಗಳು ಮಕ್ಕಳಿಗೆ ಆಶೀರ್ವದಿಸಿದರು.

ಶ್ರೀಗಳೊಂದಿಗೆ ಹೂವಿನಹಡಗಲಿ ಹಿರಿಶಾಂತಶ್ರೀ ಹಾಗೂ ಬಳಗನೂರಿನ ಶಿವಶಾಂತವೀರ ಶರಣರು, ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆಯ ವಟುಗಳು ಹಾಗೂ ಸಂಘಟಿಕರು ಪಾಲ್ಗೊಂಡಿದ್ದರು.

ನ.17 ರಂದು ವಿದ್ಯಾನಗರದ ಪಂಚಲಿಂಗೇಶ್ವರ ದೇವಸ್ಥಾನದಿಂದ ಸದ್ಭಾವನಾ ಪಾದಯಾತ್ರೆ ಆರಂಭಗೊಂಡು ಬೆಟ್ಟದಮಲ್ಲೇಶ್ವರ ನಗರ, ಶನೇಶ್ವರ ದೇವಸ್ಥಾನ ಬಳಿಕ ಬಿಇಎಸ್ಎಂ ಕಾಲೇಜು ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.