ಹಾವೇರಿ: ಅಶ್ವಗಳ ಮೇಲೆ ಶಿವಾಜಿ ಮಹಾರಾಜರ ವೇಷಧರಿಸಿದ ಪುಟಾಣಿ ಮಕ್ಕಳು, ಜೀಜಾಬಾಯಿ ವೇಷ ಧರಿಸಿದಮಹಿಳೆಯರು, ಮೆರವಣಿಗೆ ಯುದ್ದಕ್ಕೂ ಸಾಗಿದ ರಾಜಗಾಂಭೀರತೆಯ ನಡಿಗೆ... ಇದು ನಗರದಲ್ಲಿ ಭಾನುವಾರ ನಡೆದಜೀಜಾಬಾಯಿ ಅವರ 422ನೇ ಜನ್ಮೋತ್ಸವದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

ತಲೆಗೆ ಪೇಟ ಧರಿಸಿದ ಕ್ಷತ್ರಿಯ ಸಮಾಜ ಬಾಂದವರು, ದಾರಿಯುದ್ದಕ್ಕೂ ಕ್ಷತ್ರಿಯ ಸಮಾಜ, ಶಿವಾಜಿ ಮಹಾರಾಜ, ಜೀಜಾಬಾಯಿ ಅವರಿಗೆ ಘೋಷಣೆಗಳು ಮೆರವಣಿಗೆಯಲ್ಲಿ ಕೇಳಿ ಬಂದವು.

ನಗರದ ಹುಕ್ಕೇರಿ ಮಠದಿಂದ ಆರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುಭವನ ತಲುಪಿತು. ಮೆರವಣಿಗೆಯಲ್ಲಿ ಕ್ಷಾತ್ರ ಪರಂಪರೆಯ ಐತಿಹಾಸಿಕ ರಾಜ ವೈಭವದಮೆರುಗು ತೋರುವ ಬೈಕ್ ರ್‍ಯಾಲಿ, ರಾಜವಾಡೆ ಸೈನ್ಯ, ಹಾಗೂ ಛತ್ರ ಚಾಮರ ಕುದುರೆ ಕಹಳೆ, ಸವಾರ ವಾದ್ಯಗಳೊಂದಿಗೆ ಮೆರೆವಣಿಗೆಯೂ ಎಲ್ಲರ ಗಮನ ಸೆಳೆಯಿತು

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಜೀಜಾಬಾಯಿ ಶಿವಾಜಿಗೆ ನೀಡುತ್ತಿದ್ದ ಮಾದರಿಯಲ್ಲಿ ಸಂಸ್ಕೃತಿ, ಆಚಾರ ವಿಚಾರಗಳ ಶಿಕ್ಷಣವನ್ನು ಈಗಿನ ತಾಯಂದಿರು ಮಕ್ಕಳ ನೀಡಬೇಕು ಎಂದರು.

ಕ್ಷತ್ರಿಯ ಸಮಾಜದ ಎಲ್ಲರೂ ಒಗ್ಗೂಡಿ ಬೃಹತ್ ಕಾರ್ಯಕ್ರಮವನ್ನು ಮಾಡಬೇಕು. ಮಹಿಳಾ ಸಮಾವೇಶದಂತಹ ಕಾರ್ಯಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ಆಯೋಜಿಸಬೇಕು. ಈ ಮೂಲಕ ಸಂಘಟನೆ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕ್ಷತ್ರೀಯ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಜೋರಾಪುರಿ ಮಾತನಾಡಿ, ಮಹಿಳೆಯರು ಜೀಜಾಬಾಯಿ ಅವರ ತತ್ವಾದರ್ಶವನ್ನು ಅಳವಡಿಸಿಕೊಳ್ಳಬೇಕು. ಆಕೆ ತನ್ನ ಮಗ ಶಿವಾಜಿಗೆ ಹೇಳುತ್ತಿದ್ದ ಧೈರ್ಯದ ಮಾತು, ಮಾರ್ಗದರ್ಶನ, ಶಿಕ್ಷಣದ ಸ್ವರೂಪವನ್ನು ಈಗಿನ ತಾಯಂದಿರು ತನ್ನ ಮಕ್ಕಳಿಗೆ ನೀಡಲು ಮುಂದಾಗಬೇಕು ಎಂದರು.

ತಾಯಂದಿರು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿಬೇಕು ಎಂದರು.

ಕ್ಷತ್ರೀಯ ಮಹಿಳಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷರಾದ ರತ್ನಾಬಾಯಿ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಘಟಕದ ಅಧ್ಯಕ್ಷ ಉದಯಸಿಂಗ್, ಉಪಾಧ್ಯಕ್ಷ ಪಾಂಡುರಂಗ ಪಮ್ಮಾರ, ಮುಖಂಡರಾದ ಮಹಾವೀರ ಘನಾತೆ, ಜಯರಾಮ ಮಾಳಾಪುರ, ಅನುರಾಧಾ ಘೋಡಕೆ, ಭಾಗ್ಯಶ್ರೀ ಮೊರೆ, ಪ್ರಕಾಶ ಮುಂಜೋಜಿ, ಚಂದ್ರಶೇಖರ ಜಾದವ, ಮಮತಾ ಲಮಾಣಿ, ರವಿ ಕಲಾಲ, ಮುಕ್ತಾಬಾಯಿ ಲೋಕೊಂಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.