ಹಾವೇರಿ: ‘ರಾಣಾ ಹಾಗೂ ರಕ್ಷಿತಾ’ ಹೆಸರಿನ ಎರಡು ಶ್ವಾನಗಳಿಗೆ ಸಂಬಂಧಪಟ್ಟಂತೆ ಮಾಲೀಕ ಹಾಗೂ ಸಾಕಿದ್ದ ವ್ಯಕ್ತಿ ನಡುವೆ ನಡೆದಿದ್ದ ಜಗಳ ಹಾವೇರಿ ಶಹರ ಠಾಣೆ ಮೆಟ್ಟಿಲೇರಿದ್ದು, ಶ್ವಾನಗಳನ್ನು ಮಾಲೀಕರ ಸುಪರ್ದಿಗೆ ಒಪ್ಪಿಸಿ ಪ್ರಕರಣವನ್ನು ಪೊಲೀಸರು ಸುಖಾಂತ್ಯಗೊಳಿಸಿದ್ದಾರೆ.

‘ಶ್ವಾನಗಳ ಮಾಲೀಕ ರಾಕೇಶ ಬಾರಂಗಿ ಹಾಗೂ ಶ್ವಾನ ಸಾಕಿದ್ದ ಚಂದ್ರಶೇಖರ ಮೇಟಿ ನಡುವೆ ಶ್ವಾನಗಳ ಮಾಲೀಕತ್ವ ವಿಚಾರವಾಗಿ ವ್ಯಾಜ್ಯವಿತ್ತು. ಮಾಲೀಕ ರಾಕೇಶ, ಶ್ವಾನ ನಾಪತ್ತೆಯಾಗಿರುವ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ, ಶ್ವಾನಗಳನ್ನು ಅವರ ಸುಪರ್ದಿಗೆ ವಹಿಸಲಾಗಿದೆ. ಶ್ವಾನಗಳನ್ನು ಸಾಕಿದ್ದ ಚಂದ್ರಶೇಖರ ಅವರಿಗೆ ನಿರ್ವಹಣೆ ವೆಚ್ಚವಾಗಿ ₹ 9 ಸಾವಿರ ಕೊಡಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಏನಿದು ಶ್ವಾನಗಳ ಪ್ರಕರಣ: ‘ಸ್ನೇಹಿತರೊಬ್ಬರಿಂದ ಪಡೆದಿದ್ದ ಜರ್ಮನ್ ಶೆಪರ್ಡ್ ತಳಿಯ ಹೆಣ್ಣು ಶ್ವಾನವನ್ನು ರಾಕೇಶ ಅವರು ಸಾಕುತ್ತಿದ್ದರು. ತಮ್ಮ ತೋಟದಲ್ಲಿ ಬಿಟ್ಟಿದ್ದರು. ಹೊಲದಲ್ಲಿ ಚಿರತೆ ಕಾಣಿಸುತ್ತಿದ್ದರಿಂದ ಶ್ವಾನವನ್ನು ಹಾವೇರಿಯ ಬಸವೇಶ್ವರನಗರದಲ್ಲಿರುವ ತಮ್ಮ ಮನೆಗೆ ಕರೆತಂದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮನೆಯಲ್ಲಿಯೇ ಶ್ವಾನ ಹೆಣ್ಣು ಮರಿ ಹಾಕಿತ್ತು. ಎರಡೂ ಶ್ವಾನಗಳನ್ನು ಸಾಕಲು ತೊಂದರೆ ಉಂಟಾಗಿತ್ತು. ಅದೇ ಕಾರಣಕ್ಕೆ ರಾಕೇಶ್, ತಮ್ಮ ಸ್ನೇಹಿತ ಮದನ್ ಅವರಿಗೆ ಶ್ವಾನಗಳನ್ನು ನೀಡಿದ್ದರು. ಶ್ವಾನವನ್ನು ತಮ್ಮ ಬಳಿ ಇಟ್ಟುಕೊಳ್ಳದ ಮದನ್, ಪರಿಚಯಸ್ಥರ ಮೂಲಕ ಹೂವಿನಶಿಗ್ಲಿಯ ಚಂದ್ರಶೇಖರ ಮೇಟಿ ಅವರಿಗೆ ಹಸ್ತಾಂತರಿಸಿದ್ದರು. ಶ್ವಾನ ಸಾಕುವುದನ್ನು ಹವ್ಯಾಸ ಮಾಡಿಕೊಂಡಿದ್ದ ಚಂದ್ರಶೇಖರ, ಒಂದೂವರೆ ತಿಂಗಳು ಎರಡೂ ಶ್ವಾನಗಳನ್ನು ಸಾಕಿದ್ದರು.’

‘ಇತ್ತೀಚೆಗೆ ಶ್ವಾನಗಳನ್ನು ವಾಪಸು ಪಡೆಯಲು ರಾಕೇಶ್ ಮುಂದಾಗಿದ್ದರು. ಆದರೆ, ಮದನ್ ಬಳಿ ಶ್ವಾನಗಳು ಇರಲಿಲ್ಲ. ಚಂದ್ರಶೇಖರ ಬಳಿ ಇರುವುದು ಗೊತ್ತಾಗಿ, ಅವರ ಬಳಿ ಹೋಗಿ ವಿಚಾರಿಸಿದ್ದರು. ಆದರೆ, ಅವರು ಶ್ವಾನಗಳನ್ನು ನೀಡಿರಲಿಲ್ಲ. ಅವಾಗಲೇ ರಾಕೇಶ, ಶ್ವಾನ ನಾಪತ್ತೆ ಬಗ್ಗೆ ಠಾಣೆಯ ಇನ್ಸ್ಪೆಕ್ಟರ್ ಮೋತಿಲಾಲ ಪವಾರ ಬಳಿ ಅರ್ಜಿ ಸಲ್ಲಿಸಿದ್ದರು. ಚಂದ್ರಶೇಖರ ಅವರನ್ನು ಠಾಣೆಗೆ ಕರೆಸಿದ್ದ ಸಿಬ್ಬಂದಿ, ಬುದ್ದಿವಾದ ಹೇಳಿ ಕಾನೂನುಬದ್ಧವಾಗಿಯೇ ಶ್ವಾನಗಳನ್ನು ಮಾಲೀಕರಿಗೆ ಕೊಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.