ಹಾವೇರಿ: ‘ಇಂದಿನ ರಾಜಕೀಯ ದಂಧೆಯಾಗಿದೆ. ಹಣದ ಪ್ರಭಾವವಿರುವ, ತೋಳ್ಬಲ ಹೊಂದಿರುವ ಹಾಗೂ ಅಪರಾಧ ಹಿನ್ನೆಲೆಯುಳ್ಳ ಜನರೇ ಇಲ್ಲಿ ತುಂಬಿಕೊಂಡಿದ್ದಾರೆ. ಪ್ರಾಮಾಣಿಕ, ಸ್ವಚ್ಛ ಹಾಗೂ ದಕ್ಷ ರಾಜಕೀಯ ಪಕ್ಷಗಳ ಅವಶ್ಯಕತೆ ಹೆಚ್ಚಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಹಾಗೂ ಇತರೆ ಮಹಾನ್ ವ್ಯಕ್ತಿಗಳು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಸಿಕ್ಕ ನಂತರ ಸದ್ಯದ ಪರಿಸ್ಥಿತಿಯಲ್ಲಿ ಸ್ವಚ್ಛ ರಾಜಕೀಯದ ಅಗತ್ಯತೆ ಹೆಚ್ಚಿದೆ’ ಎಂದರು.

‘ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಇವರ ರಾಜಕೀಯ ಕೀಳುಮಟ್ಟಕ್ಕೆ ಇಳಿದಿದೆ’ ಎಂದು ಹೇಳಿದರು.

‘ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ಮೂಲಕ ರವಿ ಕೃಷ್ಣಾರೆಡ್ಡಿ ಅವರು ನ್ಯಾಯ ಮತ್ತು ಸತ್ಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದ ಮುಂಬರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದ ಜನರು, ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ರವಿಕೃಷ್ಣಾರೆಡ್ಡಿ ಅವರನ್ನು ಬೆಂಬಲಿಸುವ ಮೂಲಕ ಹೊಸ ರಾಜಕೀಯ ಬದಲಾವಣೆಗೆ ನಾಂದಿ ಹಾಡಬೇಕು’ ಎಂದು ಕೋರಿದರು.

ರಾಣೆಬೆನ್ನೂರಿನ ವೈದ್ಯ ಎಸ್. ಎಲ್. ಪವಾರ ಮಾತನಾಡಿ, ‘ನಮ್ಮ ಜಿಲ್ಲೆಯ ಕ್ಷೇತ್ರದಲ್ಲಿ ಸ್ಪರ್ಧಿಸಲು ರವಿ ಕೃಷ್ಣಾರೆಡ್ಡಿ ಬಂದಿರುವುದು ಸ್ವಾಗತಾರ್ಹ. ಅವರಿಗೆ ಜನರ ಬೆಂಬಲ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.