ಹಾವೇರಿ: ಟಿ.ವಿ. ಪತ್ರಕರ್ತರೆಂದು ಬಿಂಬಿಸಿಕೊಂಡು, ತಾಲ್ಲೂಕಿನ ಕಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ಆಫೀಸರ್ ಅನ್ನು ಬೆದರಿಸಿ ₹70 ಸಾವಿರ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಅಸುಂಡಿ ಗ್ರಾಮದ ರುದ್ರಗೌಡ ಮಹದೇವಗೌಡ ಪಾಟೀಲ (36), ರಾಣೆಬೆನ್ನೂರಿನ ವಿದ್ಯಾನಗರದ ನಾಗರಾಜ ಟೋಪನಗೌಡ ಪಾಟೀಲ (32) ಹಾಗೂ ಬ್ಯಾಡಗಿ ತಾಲ್ಲೂಕಿನ ಕಲ್ಲೇದೇವರು ಗ್ರಾಮದ ಮಾಲತೇಶ ಬಸವಂತಪ್ಪ ಕನಕಪ್ಪನವರ (40) ಬಂಧಿತ ಆರೋಪಿಗಳು.

ಕಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಚೆಗೆ ಬಂದಿದ್ದ ಈ ಮೂವರು, ‘ನಾವು ಜನಸ್ಪಂದನಾ ವಾಹಿನಿ ಸಂಪಾದಕರು ಮತ್ತು ವರದಿಗಾರರು’ ಅಂತ ಹೇಳಿಕೊಂಡಿದ್ದಾರೆ.

"ನಿಮ್ಮ ಮೇಲೆ ನಮಗೆ ದೂರುಗಳು ಬಂದಿವೆ. ಇದನ್ನು ಮುಚ್ಚಿಹಾಕಲು ₹2 ಲಕ್ಷ ಕೊಡಬೇಕು. ಇಲ್ಲವಾದರೆ ಟಿ.ವಿ.ಯಲ್ಲಿ ನಿಮ್ಮ ಮೇಲಿನ ಪ್ರಕರಣಗಳ ಬಗ್ಗೆ ಪ್ರಸಾರ ಮಾಡುತ್ತೇವೆ’ ಎಂದು ಬೆದರಿಸಿ, ಫೋನ್ ಪೇ ಮೂಲಕ ₹70 ಸಾವಿರ ಹಣವನ್ನು ಹಾಕಿಸಿಕೊಂಡು ಹೋದರು’ ಎಂದು ನರ್ಸಿಂಗ್ ಆಫೀಸರ್ ಸಾವಿತ್ರಿ ಪಟಗಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.