ರಾಣೆಬೆನ್ನೂರು: ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದಕ್ಕೆ ಅಪರಾಧಿಗಳಿಗಳಾದ ಪತಿ ವೀರೇಂದ್ರ ಪೋರಾಪುರ, ಅತ್ತೆ ರತ್ನವ್ವ ಪೋರಾಪುರ, ಮಂಜುನಾಥ ಪೋರಾಪುರ ಅವರಿಗೆ ರಾಣೆಬೆನ್ನೂರಿನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಎಂ.ಎಸ್.ಅವರು ತಲಾ 3 ತಿಂಗಳು ಜೈಲುಶಿಕ್ಷೆ ಮತ್ತು ತಲಾ ₹500 ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ.

ದೂರು ನೀಡಿದ ಸಂತ್ರಸ್ತೆಯನ್ನು ವೀರೇಂದ್ರ ಪೋರಪುರ 2015ರಲ್ಲಿ ವಿವಾಹವಾಗಿದ್ದು, ತನ್ನ ತಾಯಿ ರತ್ನವ್ವ ಪೋರಪುರ ಹಾಗೂ ಮಂಜುನಾಥ ಪೋರಾಪುರ ಅವರೊಂದಿಗೆ ಇಲ್ಲಿನ ಅಶೋಕನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಕ್ಕೆ ಪತ್ನಿ 2018ರಲ್ಲಿ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಗರ ಠಾಣೆ ಪಿಎಸ್ಐ ಸಿ.ಬಿ. ಹಡಪದ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಸಂತೋಷಕುಮಾರ್ ಎಸ್.ಎಂ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.