ಬಂಕಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಜಿ+1 ಮನೆಗಳ ಆವರಣದಲ್ಲಿ ಕಸ ಹರಡಿದ್ದು ಅವ್ಯವಸ್ಥೆ ತಾಣವಾಗಿದೆ
ಬಂಕಾಪುರ ಪಟ್ಟಣದಲ್ಲಿ ಜಿ+1ಮನೆಗಳ ನಿರ್ಮಾಣವಾದ ಮನೆಗಳ ಮುಂದಿನ ಚರಂಡಿಗಳು ಅವೈಜ್ಞಾನಿವಾಗಿದ್ದು ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ
ಬಂಕಾಪುರ ಪಟ್ಟಣದಲ್ಲಿ ಜಿ+1ಮನೆಗಳ ನಿರ್ಮಾಣಗೊಂಡ ಮನೆಗಳು ಆರಂಭಿಕ ಹಂತದಲ್ಲೇ ಬಿರುಕು ಬಿಟ್ಟಿರುವುದು
20 ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದ್ದು ಪ್ರತಿ ವರ್ಷ ಯೋಜನಾ ಗಾತ್ರ ಹೆಚ್ಚಾಗುತ್ತಿದೆ. ಆದರೆ ಮನೆಗಳ ಹಂಚಿಕೆ ಮಾತ್ರ ನಡೆದಿಲ್ಲ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ
ಮಂಜುನಾಥ ಕೂಲಿ ಸಮಾಜ ಸೇವಕ ಬಂಕಾಪುರನಿರ್ಮಾಣಗೊಂಡಿರುವ ಮನೆಗಳ ಉದ್ಘಾಟನೆಯಾಗಿದ್ದು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಅವುಗಳ ದುರಸ್ತಿ ಕಾರ್ಯ ಮುಗಿದ ತಕ್ಷಣ ಮನೆಗಳ ಹಂಚಿಕೆ ಮಾಡಲಾಗುವುದು
– ಶಿವಪ್ಪ ಎ ಪುರಸಭೆ ಮುಖ್ಯಾಧಿಕಾರಿ ಬಂಕಾಪುರಮಾಂಗಲ್ಯ ಮಾರಿ ಹಣ ತುಂಬಿದ್ದೇನೆ!
‘ಮಾಂಗಲ್ಯ ಸರ(ತಾಳಿ) ಮಾರಿಕೊಂಡು ಹಣ ತುಂಬಿದ್ದೇನೆ. ಕೊರಳಲ್ಲಿ ಬಂಗಾರದ ತಾಳಿ ಬದಲಾಗಿ ಅರಿಸಿನ ಬೇರು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದೇನೆ. ಮನೆಗಳನ್ನು ಬೇಗ ನೀಡಿರಿ ಎಂದು ಕಂಡ ಕಂಡ ಅಧಿಕಾರಿಗಳ ಕಾಲುಮುಗಿದೆ. ಆದರೂ ಈವರೆಗೆ ಮನೆ ಸಿಕ್ಕಿಲ್ಲ. ಹೀಗಾಗಿ ಚಹಾದಂಗಡಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ’ ಎಂದು ಫಲಾನುಭವಿ ರೇಣುಕಾ ಪೂಪಳೆ ಅಳಲು ತೋಡಿಕೊಂಡರು.