ಶಿಗ್ಗಾವಿ: 'ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು' ಎಂದು ಪಟ್ಟು ಹಿಡಿದಿರುವ ಪಟ್ಟಣದಲ್ಲಿರುವ ಹುಲಗೂರು ರಸ್ತೆಯ ನಿವಾಸಿಗಳು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

'104 ಮನೆಗಳಿರುವ ಪ್ರದೇಶದಲ್ಲಿ ಪಹಣಿ ಪತ್ರ ನೀಡಿಲ್ಲ. ಮೂಲ ಸೌಕರ್ಯಗಳ ಕೊರತೆ ಇದೆ' ಎಂದು ನಿವಾಸಿಗಳು ದೂರಿದರು.

'ಪ್ರತಿ ಚುನಾವಣೆಯಲ್ಲಿ ಮತದಾನ ಮಾಡಿದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಅದಕ್ಕೆ ಬೇಸತ್ತು, ಈ ಬಾರಿ ಮತದಾನ ಬಹಿಷ್ಕಾರಿಸಲು ತೀರ್ಮಾನಿಸಿದ್ದೇವೆ' ಎಂದು ಹೇಳಿದರು.

'104 ಮನೆಗಳ ಪೈಕಿ ಕೆಲ ಮನೆಗಳಿಗೆ ಮಾತ್ರ ಪಹಣಿ ಪತ್ರ ನೀಡಿದ್ದಾರೆ. ಅರ್ಹರೆಲ್ಲರಿಗೂ ಪಹಣಿ ಪತ್ರ ನೀಡಬೇಕು. ಮೂಲ ಸೌಕರ್ಯ ಕಲ್ಪಿಸಬೇಕು' ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಸಂತೋಷ ನಿವಾಸಿಗಳ ಮನವಿ ಆಲಿಸಿದರು. ಪ್ರತಿಭಟನೆ ಹಿಂಪಡೆಯುವಂತೆ ಕೋರಿದರು. ಆದರೆ, ಅದಕ್ಕೆ ಒಪ್ಪದ ನಿವಾಸಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.