ಆಳಂದ: ಪಟ್ಟಣದ ಅಫ್ಜಲ್ ಮಶಾಕಬೀ ತಾಹೀರ್ ಅನ್ಸಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಸೆ.24ರಂದು ಬೆಳಗ್ಗೆ 10ಕ್ಕೆ ಪಟ್ಟಣದ ವಿವೇಕ ವರ್ಧಿನಿ ಪಬ್ಲಿಕ್ ಶಾಲೆಯಲ್ಲಿ ‘ಸತ್ಯ ಮತ್ತು ಅಹಿಂಸೆ: ಜಾಗತಿಕ ಶಾಂತಿಗಾಗಿ ಗಾಂಧಿ ಮಾರ್ಗ’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ರವಿಚಂದ್ರ ಕಂಟೆಕೂರೆ ತಿಳಿಸಿದ್ದಾರೆ.

ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ಅವರು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಪ್ರಾಂಶುಪಾಲ ರವಿಚಂದ್ರ ಕಂಟೇಕೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಜಂಟಿ ನಿರ್ದೇಶಕ ಶಿವಶರಣಪ್ಪ ಗೋಳ್ಳೆ ಉಪಸ್ಥಿತರಿರುವರು.

21ನೇ ಶತಮಾನದಲ್ಲಿ ಗಾಂಧಿ ಮಾರ್ಗದಲ್ಲಿ ಯುವಕರು,ಕಸ್ತೂರಬಾ ಗಾಂಧಿ ಮತ್ತು ಸ್ತ್ರೀಪರ ಚಿಂತನೆ. ಜಗತ್ತಿನ ನಾಯಕರ ಮೇಲೆ ಗಾಂಧಿ ಪ್ರಭಾವ ಈ ಕುರಿತು ಮೂರು ಗೋಷ್ಠಿ ಜರುಗುಲಿವೆ. ಚಿಂತಕರಾದ ನಿಕೇತರಾಜ್ ಮೌರ್ಯ, ಪುಣೆಯ ಬುಜಂಗರಾವ ಬೋಬಡೆ, ವಿಜಯಪುರದ ಗಾಂಧೀಜಿ ಫೌಂಡೇಷನ್ ಅಧ್ಯಕ್ಷ ನೇತಾಜಿ ಗಾಂಧಿ ಹಾಗೂ ಬೆಂಗಳೂರಿನ ಅಬಿದಾ ಬೇಗಂ ಅವರು ಉಪನ್ಯಾಸ ಮಂಡಿಸಿಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎನ್ ಜಿ ಕಣ್ಣೂರು, ಪತ್ರಾಗಾರ ಇಲಾಖೆ ವಿಭಾಗೀಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಪಾಲ್ಗೊಳ್ಳಲಿದ್ದಾರೆ.

ಕಲಬುರಗಿ ವಿಭಾಗ ಮಟ್ಟದ ಸರಕಾರಿ, ಅನುದಾನಿತ ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಒಒಡಿ ಸೌಲಭ್ಯ ಕಲ್ಪಿಸಿದೆ. ತಾಲ್ಲೂಕಿನ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.