ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಹಾಗೂ ಕೊಪ್ಪಳ ಹಗೂ ಬಳ್ಳಾರಿ ಜಿಲ್ಲೆಗಳ ಲೇಖಕರಿಗೆ ಪ್ರಶಸ್ತಿ ನೀಡುವ ಸಲುವಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಪುಸ್ತಕಗಳನ್ನು ಆಹ್ವಾನಿಸಿದೆ.

ಕನ್ನಡದ ಐದು, ಕನ್ನಡ ಜಾನಪದ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ತೆಲಗು ಮತ್ತು ಅನುವಾದ ಸಾಹಿತ್ಯ ಹಾಗೂ ಸಮಾಜ ವಿಜ್ಞಾನದ ಒಂದು ಪುಸ್ತಕ ಸೇರಿದಂತೆ ಪ್ರತಿ ಪುಸ್ತಕದ ಲೇಖರಿಗೆ (ಒಟ್ಟು 13) ಪ್ರಶಸ್ತಿ ನೀಡಲಾಗುವುದು. ತಲಾ ₹ 5,000 ಗೌರವಧನ ನೀಡಲಾಗುವುದು.

ಈ ಗೌರವಧನ ಪ್ರಶಸ್ತಿಗಾಗಿ ಪುಸ್ತಕ ಕಳಿಸುವ ಲೇಖಕರು ಕನಿಷ್ಠ 5 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸ ಮಾಡಿರಬೇಕು. ಪುಸ್ತಕ ಕನಿಷ್ಠ 100 ಪುಟವಿರಬೇಕು. ಕವನ ಸಂಕಲನ ಕನಿಷ್ಠ 70 ಪುಟಗಳನ್ನೊಳಗೊಂಡಿರಬೇಕು. ಪಿಎಚ್.ಡಿ. ಪ್ರಬಂಧ, ಬೇರೆ ಬೇರೆ ಲೇಖಕರ ಲೇಖನಗಳ ಸಂಪಾದನೆ ಸಂಗ್ರಹ ಗ್ರಂಥಗಳನ್ನು ಪರಿಗಣಿಸಲಾಗುವುದಿಲ್ಲ.

2019 ಜನವರಿಯಿಂದ 31 ಡಿಸೆಂಬರ್ 2019ರ ಅವಧಿಯೊಳಗೆ ಪ್ರಕಟವಾದ ಪುಸ್ತಕದ 5 ಪ್ರತಿಗಳನ್ನು ಆಗಸ್ಟ್ 20ರೊಳಗಾಗಿ ಕಳುಹಿಸಬೇಕು. ‘ನಿರ್ದೇಶಕರು, ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ’ ಇಲ್ಲಿಗೆ ಕೃತಿಗಳನ್ನು ತಲುಪಿಸಿ. ಮಾಹಿತಿಗೆ 98800 88643 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.