ಕಲಬುರಗಿ: ಅಫಜಲಪುರ ತಾಲ್ಲೂಕಿನ ಮಾಶ್ಯಾಳ ಗ್ರಾಮದಲ್ಲಿ ಬುಧವಾರ ರಾತ್ರಿ ‘ಲುಡೊ’ ಆಡುವಾಗ ಜಗಳ ತಾರಕಕ್ಕೇರಿ ಯುವಕನೊಬ್ಬ 16 ವರ್ಷದ ಬಾಲಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

ಶಾಮರಾಯ ಪರೀಟ್ (16) ಕೊಲೆಯಾದ ಬಾಲಕ. ಸಚಿನ್ ಕಿರಸಾವಳಗಿ (22) ಕೊಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಲುಡೊ ಆಡುವಾಗ ಶಾಮರಾಯ ಮತ್ತು ಸಚಿನ್ ನಡುವೆ ಜಗಳವಾಗಿದೆ. ಶಾಮರಾಯನ ಸಹೋದರ ಇಬ್ಬರನ್ನೂ ಸಮಾಧಾನಪಡಿಸಿ, ಮನೆಗೆ ಕಳುಹಿಸಿದರು. ಆದರೆ, ಇಷ್ಟಕ್ಕೆ ಸಮಾಧಾನಗೊಳ್ಳದ ಸಚಿನ್ ಮನೆಯಿಂದ ಚಾಕು ತಂದು ಶಾಮರಾಯನ ಎದೆಗೆ ಇರಿದು ಕೊಲೆ ಮಾಡಿದ. ಶಾಮರಾಯನ ಸಹೋದರ ಧರ್ಮರಾಜ ದೂರು ನೀಡಿದ್ದಾರೆ’ ಎಂದು ಅಫಜಲಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಜಗದೇವಪ್ಪ ಪಾಳಾ, ಸುರೇಶಕುಮಾರ ಚವ್ಹಾಣ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.