ಕಲಬುರಗಿ: ‘ನಾನು ವಕ್ಫ್ ಭೂಮಿ ಕಬಳಿಸಿದ್ದೇನೆ ಎಂದು ಆರೋಪ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಕುರಿತು ಬೇಷರತ್ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಜಮೀನು ದಾನ ನೀಡಿದ್ದೇನೆಯೇ ಹೊರತು ಕಬಳಿಸಿಲ್ಲ. ಯತ್ನಾಳ್ಗೆ ಸಕ್ಕರೆ ಕಾರ್ಖಾನೆ ಎಲ್ಲಿಂದ ಬಂತು? ಮೊದಲು ಬಡವರಿಗೆ ಮನೆ ಕಟ್ಟಿಸಿಕೊಡಿ. ಪ್ರತಿ ವರ್ಷ ನಿಮ್ಮ ಆಸ್ತಿ ಜಾಸ್ತಿಯಾಗುತ್ತಿದೆ. ಎಲ್ಲಿಂದ ಅದು ಬರುತ್ತಿದೆ’ ಎಂದು ಪ್ರಶ್ನಿಸಿದರು.

‘ಯತ್ನಾಳ್–ವಿಜಯೇಂದ್ರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದರ ಮಧ್ಯೆ ಮುಸ್ಲಿಮರನ್ನು ತೆಗೆದುಕೊಂಡು ಬರುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ಗೆ ಅನುಭವದ ಕೊರತೆ ಇದೆ. ಅದಕ್ಕೆ ಏನೋ ಮಾಡೋಕೆ ಹೋಗಿ ಈ ರೀತಿ ಒದ್ದಾಟ ನಡೆಯುತ್ತಿದೆ’ ಎಂದರು.

‘ರಾಜಕಾರಣಿಗಳು ಸಮಾಜವನ್ನು ಕೂಡಿಸುವ ಕೆಲಸ ಮಾಡಬೇಕು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ 245 ನೋಟಿಸ್ ನೀಡಿತ್ತು. ಇದೊಂದು ಸಹಜ ಪ್ರಕ್ರಿಯೆ. ನಾನು, ಕೋಡಿಹಳ್ಳಿ ಚಂದ್ರಶೇಖರ ವಿವಾದ ಇರುವ ಕಡೆ ಪ್ರವಾಸ ಮಾಡುತ್ತೇವೆ. ಯಾರು ಜಮೀನಿನಲ್ಲಿ ದುಡಿಯುತ್ತಾನೋ ಅವನದ್ದೇ ಭೂಮಿ ಅಂತ ಇಸ್ಲಾಂ ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ಸುಮ್ಮನೇ ವಿವಾದ ಮಾಡುತ್ತಿದೆ. ಹಿಜಾಬ್, ರಾಮ ಮಂದಿರದ ಬಳಿಕ ಇವಾಗ ವಕ್ಫ್ ವಿವಾದ ಮುನ್ನೆಲೆಗೆ ತಂದಿದ್ದಾರೆ’ ಎಂದು ಇಬ್ರಾಹಿಂ ಟೀಕಿಸಿದರು.

‘ರಾಜ್ಯದಲ್ಲಿ ಗಟ್ಟಿಯಾದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಸಮಾನ ಮನಸ್ಕರು ಸೇರಿ ಪಕ್ಷ ಕಟ್ಟಬೇಕು ಅಂತ ತೀರ್ಮಾನ ಮಾಡಿದ್ದೇವೆ. ಜನವರಿಯಲ್ಲಿ ಇದಕ್ಕೊಂದು ರೂಪ ಕೊಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.