ಕಲಬುರಗಿ: ವಿಧಾನಸಭೆ ಚುನಾವಣೆ ಪ್ರಚಾರವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರು ಮತ್ತು ಸ್ಥಳೀಯರೊಂದಿಗೆ ಎಲ್ಲೆಡೆ ಮತಯಾಚಿಸುತ್ತಿದ್ದಾರೆ. ಮತದಾರರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ಬಹುತೇಕ ಅಭ್ಯರ್ಥಿಗಳು ತಮ್ಮ ಬಲ ಪ್ರದರ್ಶಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಮ್ಮ ಪರವಾಗಿ ನಡೆಯುವ ಚುನಾವಣೆ ಪ್ರಚಾರ, ರ್ಯಾಲಿ ಹಾಗೂ ರೋಡ್ ಶೋಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಇದಕ್ಕಾಗಿಯೇ ಕೆಲ ಅಭ್ಯರ್ಥಿಗಳು ದಿನಗೂಲಿ ಆಧಾರದ ಮೇಲೆ ನಿತ್ಯ ಪ್ರಚಾರಕ್ಕೆಂದೇ ಕಟ್ಟಡ ಕಾರ್ಮಿಕ, ಪ್ಲಂಬರ್, ಪೇಂಟರ್, ಕೂಲಿ ಕಾರ್ಮಿಕ, ಕೂಲಿ ಕಾರ್ಮಿಕ ಮಹಿಳೆ ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಮೊರೆ ಹೋಗಿದ್ದಾರೆ. ಪಕ್ಷದ ಅಭ್ಯ ರ್ಥಿಗಳು ಮತ್ತು ಪ್ರಮುಖರು ನೀಡುವ ದಿನಗೂಲಿಯನ್ನೇ ನಂಬಿ ಕಾರ್ಮಿಕರು, ನಿತ್ಯ ಕೆಲಸಕ್ಕೆ ಹೋಗುವ ಸ್ಥಳದಿಂದ ದೂರವಾಗಿದ್ದಾರೆ.

ನಿತ್ಯ ₹ 200 ಕೂಲಿ, ಉಪಾಹಾರ, ಊಟ ಉಚಿತ: ‘ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಸರ್ಕಾರಿ ಮತ್ತು ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಬದುಕಿಗೆ ದಿನಗೂ ಲಿಯನ್ನು ನಂಬಿರುವ ಕಾರ್ಮಿಕರು ಕೆಲ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರಿಗೆ ಅಭ್ಯರ್ಥಿಗಳ ಬೆಂಬಲಿಗರು ನಿತ್ಯ ₹ 200 ರಿಂದ ₹ 300 ದಿನಗೂಲಿ, ಉಚಿತವಾಗಿ ಉಪಹಾರ ಹಾಗೂ ಊಟ ಕೊಡುತ್ತಾರೆ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ನ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲಬುರ್ಗಿಯಲ್ಲಿ ತಾರಫೈಲ್ ಪ್ರದೇಶ, ದುಬಾಯಿ ಕಾಲೊನಿ, ರಾಮಜಿನಗರ, ಆಶ್ರಯ ಕಾಲೊನಿ, ಎಸ್.ಎಂ.ಕೃಷ್ಣ ನಗರ, ಯಾದುಲ್ಲಾ ಕಾಲೊನಿ, ಬಸವ ನಗರ, ಬ್ರಹ್ಮಪುರ ವಡ್ಡರ ಗಲ್ಲಿ, ರಾಜಪೂರ ಸೇರಿ ನಗರದ ಬಹುತೇಕ ಹಿಂದುಳಿದ ಪ್ರದೇಶಗಳಲ್ಲಿ 60 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರು, ಗೌಂಡಿ ಕೆಲಸಗರಾರರು ಹಾಗೂ ದಿನಗೂಲಿ ಕಾರ್ಮಿಕರು ವಾಸವಿದ್ದಾರೆ. ಇವರಲ್ಲಿ ಕೆಲವರು ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಕಟ್ಟಡ ಕಾರ್ಮಿಕರು, ಗೌಂಡಿ ಕೆಲಸಗಾರಿಗೆ ಅವರ ಮೂಲ ಕೆಲಸ ಸ್ಥಗಿತಗೊಳ್ಳುತ್ತದೆ. ಸರ್ಕಾರವು ಈ ಬಗ್ಗೆ ಮೊದಲೇ ಚಿಂತನೆ ನಡೆಸಿ, ಅವರ ಕೆಲಸಗಳಿಗೆ ತೊಂದರೆಯಾಗದಂತೆ ನೋಡಿಕೊಂಡರೆ ಯಾವ ಕೂಲಿ ಕಾರ್ಮಿಕರೂ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಅವರು ತಿಳಿಸಿದರು.

‘ನಗರದ ವಿವಿಧ ಪ್ರದೇಶಗಳಲ್ಲಿ ಕೆಲ ಅಭ್ಯರ್ಥಿಗಳ ಪರ ನಡೆಯುವ ಚುನಾವಣಾ ಕಾರ್ಯದಲ್ಲಿ ನಿತ್ಯ 400ರಿಂದ 500 ಜನ ಕೂಲಿ ಕಾರ್ಮಿಕರು ದಿನಗೂಲಿ ಲೆಕ್ಕದಲ್ಲಿ ಬೆಳಿಗ್ಗೆ 8 ರಿಂದ 11ರವರೆಗೆ ಹಾಗೂ ಸಂಜೆ 4 ರಿಂದ 7ರವರೆಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ಅವರಿಗೆ ನಿತ್ಯ ₹ 300 ಕೊಡುತ್ತಾರೆ. ಇದರಲ್ಲಿ ಮಹಿಳೆಯರೇ ಹೆಚ್ಚು ಇರುತ್ತಾರೆ. ಇವರು ಅಭ್ಯರ್ಥಿಗಳ ಪರವಾಗಿ ಮನೆ ಮನೆಗಳಿಗೆ ಹೋಗಿ ಕರಪತ್ರ ಹಂಚುತ್ತಾರೆ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್ನ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗಯ್ಯ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕರಪತ್ರ ಹಂಚಿಕೆ: ‘ಕಟ್ಟಡ ಕಾಮಗಾರಿ ಕೆಲಸ ಸಿಗುತ್ತಿಲ್ಲ. ಜೀವನ ನಡೆಸಲು ಕಷ್ಟವಾಗುತ್ತದೆ. ಹೀಗಾಗಿ ನಾವು ಕೆಲ ದಿನಗಳಿಂದ ಅಭ್ಯರ್ಥಿಯೊಬ್ಬರ ಪರವಾಗಿ ಮನೆ ಮನೆಗಳಿಗೆ ತೆರಳಿ ಅವರ ಪರವಾದ ಕರಪತ್ರಗಳನ್ನು ಹಂಚುತ್ತಿದ್ದೇವೆ. ಸಂಜೆಯಾಗುತ್ತಿದ್ದಂತೆ ನಮಗೆ ₹ 200 ಕೊಡುತ್ತಾರೆ. ಕೆಲವೊಮ್ಮೆ ₹ 300 ಸಹ ಕೊಡುತ್ತಾರೆ. ಜೊತೆಗೆ ಬೆಳಿಗ್ಗೆ ನಾಷ್ಟನೂ ಕೊಡುತ್ತಾರೆ’ ಎಂದು ರಾಜಪೂರದ ಕೂಲಿ ಕಾರ್ಮಿಕರೊಬ್ಬರು ಹೇಳುತ್ತಾರೆ.

‘ರಾಜಪೂರದಿಂದಲೆ ನಿತ್ಯ 50 ರಿಂದ 60 ಜನ ಕೂಲಿ ಕಾರ್ಮಿಕರು ಬೆಳಿಗ್ಗೆಯಿಂದ ಸಂಜೆಯ ತನಕ ಪ್ರಚಾರ ಕೆಲಸಕ್ಕೆ ಹೋಗುತ್ತಾರೆ. ಅವರಲ್ಲಿ ಮನೆಗೆಲಸ ಮಾಡುವ ಮಹಿಳೆಯರೇ ಹೆಚ್ಚು ಇರುತ್ತಾರೆ’ ಎನ್ನುತ್ತಾರೆ ಅವರು.

‘ಮೂರು ದಿನಗಳಿಂದ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೆ. ಒಂದು ದಿನ ₹ 300 ಕೂಲಿ ಕೊಟ್ಟರು, ಮೊತ್ತೊಂದು ದಿನದ ₹ 200 ಕೂಲಿ ಕೊಟ್ಟರು. ಸಂಜೆ ಅವರು ಕೂಲಿ ಹಣ ಕೊಡುವವರೆಗೆ ಅವರ ಮನೆ ಮುಂದೆ ನಿಲ್ಲಬೇಕು. ಕೆಲವೊಮ್ಮೆ ಹಣವನ್ನೇ ಕೊಡಲ್ಲ’ ಎಂದು ತಾರಫೈಲ್ ಪ್ರದೇಶದ ಕೂಲಿ ಕಾರ್ಮಿಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೂಲಿ ಕಾರ್ಮಿಕ ಮಹಿಳೆಯರಿಗೆ ನಿತ್ಯ ₹ 200 ದಿನಗೂಲಿ ಕೊಡುತ್ತೇವೆ ಎಂದು ಆಮೀಷವೊಡ್ಡಿ ಅವರನ್ನು ಪ್ರಚಾರ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.