ಚಿತ್ತಾಪುರ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ದಂಡೋತಿ ಸಮೀಪದಲ್ಲಿ ಭಾನುವಾರ ತಡ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಗಿಣಾ ನದಿ ಸೇತುವೆಯ ಕೆಳಗೆ ಬಿದ್ದು ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

ಚಿತ್ತಾಪುರ ಪಟ್ಟಣದ ನಿವಾಸಿ, ಚಾಲಕ ನಿಂಗಪ್ಪ ಪೂಜಾರಿ (40) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಮೇಶ ಮತ್ತ ಕೃಷ್ಣ ಅವರು ಗಾಯಗೊಂಡಿದ್ದಾರೆ.

ಹಳೆಯ ಕಾರು ಖರೀದಿಗಾಗಿ ಚಿಂಚೋಳಿ ತಾಲ್ಲೂಕಿನ ಕೊಂಚಾವರಂಕ್ಕೆ ಹೋಗಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟಿಲ, ಮಾಡಬೂಳ ಠಾಣೆಯ ಪಿಎಸ್ಐ ಚೇತನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಗಿಣಾ ನದಿಗೆ ಬಿದ್ದ ಕಾರನ್ನು ಮಾಡಬೂಳ ಪಿಎಸ್ಐ ಚೇತನ್ ಅವರು ಸೋಮವಾರ ಮಧ್ಯಾಹ್ನ ಜೆಸಿಬಿ ಯಂತ್ರದಿಂದ ಹೊರಕ್ಕೆ ತೆಗೆಯಿಸಿದ್ದಾರೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.