ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಬ್ರಿಜ್‌ ಕಂ ಬ್ಯಾರೇಜ್‌ ಬಹುತೇಕ ಪೂರ್ಣ

Published 14 ಜುಲೈ 2024, 7:05 IST
Last Updated 14 ಜುಲೈ 2024, 7:05 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಅಣವಾರ ಗಂಗನಪಳ್ಳಿ ನಡುವೆ ಬ್ರಿಜ್‌ ಕಂ ಬ್ಯಾರೇಜ್‌ ಕನಸು ಕಾಣುತ್ತಿದ್ದ ಗ್ರಾಮಸ್ಥರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನೆರವಿಗೆ ಧಾವಿಸಿದ್ದು, ದಶಕಗಳ ಕನಸು ನನಸಾಗಲಿದೆ.

ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಅಂದಾಜು ₹ 10 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್‌ ಮಂಜೂರಾಗಿದ್ದು, ಹಗಲಿರುಳು ಕಾಮಗಾರಿ ನಡೆಸಿ, ಮೂರು ತಿಂಗಳಲ್ಲಿಯೇ ಬಹುತೇಕ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. 108 ಮೀಟರ್ ಉದ್ದ, 3 ಮೀಟರ್ ಎತ್ತರದ 5.5 ಮೀಟರ್ ಅಗಲದ ಒಟ್ಟು 20 ಪಿಲ್ಲರ್‌ಗಳ ಬ್ರಿಜ್ ಕಂ ಬ್ಯಾರೇಜ್‌ ಉಭಯ ಗ್ರಾಮಗಳ ರೈತರಿಗೆ ವರದಾನವಾಗಿ ಪರಿಣಮಿಸಲಿದೆ.

ಪಿಲ್ಲರ್, ಸ್ಲ್ಯಾಬ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ಹಂತದ ಚಿಕ್ಕಪುಟ್ಟ ಕಾಮಗಾರಿ ಬಾಕಿಯಿದ್ದು, ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣ ಗೊಳಿಸ ಲಾಗುವುದು ಎಂದು ಸಣ್ಣ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇಂದುಧರ ಮಂಗಲಗಿ ಮತ್ತು ಸಹಾಯಕ ಎಂಜಿನಿಯರ್ ರಾಜಶೇಖರ ಅಲಗೂಡಕರ ತಿಳಿಸಿದರು.

ಗಂಗನಪಳ್ಳಿ ಕಡೆಯ ರಸ್ತೆಗೆ ಸ್ಲ್ಯಾಬ್‌ಗೆ ಸಂಪರ್ಕ ಬೆಸೆಯುವ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅಣವಾರ ಕಡೆಯ ಕೂಡು ರಸ್ತೆಯ ಕಾಮಗಾರಿ ಮತ್ತು ಸ್ಲ್ಯಾಬ್ ಸಂಪರ್ಕ ಬೆಸೆಯುವ ಕಾಮಗಾರಿ ನಡೆಸಬೇಕಾಗಿದೆ. ಸೇತುವೆಯಿಂದ ಎರಡು ಗ್ರಾಮಗಳ ಮಧ್ಯೆ ಸಂಪರ್ಕ ಸುಲಭವಾಗುತ್ತದೆ. ಗಂಗನಪಳ್ಳಿ ಸುತ್ತಲಿನ ಗ್ರಾಮಸ್ಥರು ಅಣವಾರಕ್ಕೆ ಸುಲಭವಾಗಿ ತಲುಪಬಹುದಾಗಿದೆ. ಕಲ್ಲೂರು ರೋಡ್ ಗ್ರಾಮದ ಜನ ಅಣವಾರ ಗ್ರಾಮಕ್ಕೆ ಬರಬೇಕಾದರೆ 10 ಕಿ.ಮೀ ದೂರ ಕ್ರಮಿಸಬೇಕಾಗುತ್ತಿತ್ತು. ಈಗ 6–7 ಕಿ.ಮೀ ಅಂತರದಲ್ಲಿಯೇ ತಲುಪಬಹುದು. ನದಿಯ ನೀರು ನಿಲ್ಲಿಸು ವುದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೀರಾವರಿಗೂ ಸಹಕಾರಿಯಾಗಲಿದೆ. ಅಣವಾರ ಗ್ರಾಮದ ಜಮೀನು ಗಂಗನಪಳ್ಳಿ ಕಡೆಗೂ ಇರುವುದರಿಂದ ರಾಶಿ ತರಲು ಜನರಿಗೆ ನೆರವಾಗಲಿದೆ.

ಅಣವಾರ ತೋಟಗಾರಿಕಾ ಬೇಸಾಯಕ್ಕೆ ಖ್ಯಾತಿ ಪಡೆದಿದೆ. ಬಾಳೆ ಇಲ್ಲಿನ ಪ್ರಮುಖ ಬೆಳೆಯಾಗಿದೆ. ಅವರ ಕೊಳವೆಬಾವಿಗಳಿಗೂ ಬ್ಯಾರೇಜಿನಿಂದ ಅಂತರ್ಜಲ ವೃದ್ಧಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT