ಕಲಬುರಗಿ: ಮೈಸೂರಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಕಲಬುರಗಿ ಜಿಲ್ಲೆಯ ಕ್ರೀಡಾಪಟುಗಳು ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸಾಧನೆ ಮಾಡಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಕೊಡ್ಲಿ ತಾಂಡದ ಸಂಗೀತಾ ಪಾಂಡು ಟೇಕ್ವಾಂಡೊ ಸ್ಪರ್ಧೆಯ 55 ಕೆ.ಜಿ ವಿಭಾಗದಲ್ಲಿ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ. ಮಹಿಳೆಯರ ಜೂಡೊ ಸ್ಪರ್ಧೆಯ 48 ಕೆ.ಜಿ ವಿಭಾಗದಲ್ಲಿ ಶ್ರೀಲೇಖಾ ದ್ವಿತೀಯ ಸ್ಥಾನದೊಂದಿಗೆ ರಜತ ಪದಕ ಗೆದ್ದಿದ್ದಾರೆ.

ಪುರುಷರ ಜೂಡೊ ಸ್ಪರ್ಧೆಯ 81 ಕೆ.ಜಿ ವಿಭಾಗದಲ್ಲಿ ಸುರೇಂದ್ರ ಸಿಂಗ್ 3ನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಜೇವರ್ಗಿ ತಾಲ್ಲೂಕಿನ ಬಸವರಾಜ ಆರ್. ಮೇಲಿನಮಠ ವೇಟ್‌ಲಿಫ್ಟಿಂಗ್‌ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚು ಗೆದ್ದಿದ್ದಾರೆ.

ಕುಸ್ತಿ ಸ್ಪರ್ಧೆಯ 70 ಕೆ.ಜಿ ವಿಭಾಗದಲ್ಲಿ ಅಫಜಲಪುರ ತಾಲ್ಲೂಕಿನ ಸಂತೋಷ ಹೊನ್ನಪ್ಪ ದೇಸಾಯಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಜಯಿಸಿದ್ದಾರೆ.

ಈಜು ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಕಲಬುರಗಿ ಈಜುಪಟು ಶೈಲಜಾ ಗೋಪಾಲರಾವ್ 4x100 ಫ್ರೀ ಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ. ಶೈಲಜಾ ಅವರು ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಅಭ್ಯಾಸ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.