ಕಲಬುರಗಿ: 50 ವಿದ್ಯಾರ್ಥಿಗಳಿಗೆ ಇಬ್ಬರು ಕಾರ್ಮಿಕರು ಎಂಬ ಸಮಾಜ ಕಲ್ಯಾಣ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ವಸತಿ ನಿಲಯ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಕಾವಲುಗಾರರನ್ನು ಕಾಯಂ ಗೊಳಿಸಬೇಕು ಅಥವಾ ಕಾಯಂ ಗೊಳಿಸುವವರೆಗೂ ಸೇವಾ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಸಕ್ತ ಸಾಲಿನಿಂದ ಕನಿಷ್ಠ ವೇತನ ₹35,000 ನಿಗದಿ ಮಾಡಬೇಕು. ಕಾರ್ಮಿಕ ಕಾನೂನು ಕಡ್ಡಾಯವಾಗಿ ಪಾಲಿಸಬೇಕು. ಕಾರ್ಮಿಕರಿಗೆ ಬರುವ ವೇತನದಲ್ಲಿ ಕಡಿಮೆ ಹಣ ಜಮಾ ಮಾಡುತ್ತಿರುವ ಶಾರ್ಪ್ ಗುತ್ತಿಗೆ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಟ್ಟು 13 ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಕಳುಹಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ್, ಜಿಲ್ಲಾಧ್ಯಕ್ಷ ರಾಘವೇಂದ್ರ ಎಂ.ಜಿ, ಮುಖಂಡರಾದ ಭಾಗಣ್ಣ ಬಿ.ಬುಕ್ಕಾ, ಸಂತೋಷ ದೊಡ್ಡಮನಿ, ಬಸವರಾಜ ಹುಳಗೋಳ, ಶರಣಮ್ಮ ಕಟ್ಟಿಮನಿ, ರಮೇಶ ಮುಧೋಳ, ವಿಜಯಲಕ್ಷ್ಮಿ ಕಾಶಿ, ಕಿರಣ ಹೊಸೂರ, ಬಸವರಾಜ ನಾಟೇಕರ್, ಪೀರಪ್ಪ ಜೇವರ್ಗಿ, ಗುರುನಾಥ ದೊಡ್ಡಮನಿ, ತೌಫಿಕ್ ಕೋರವಾರ, ಸೋನಾಬಾಯಿ ಭಂಕೂರ, ಹಿರಗಪ್ಪ ಕರಣಿಕ, ಮಾರುತಿ ಬೇವನಕಟ್ಟಿ, ಮಲ್ಲಮ್ಮ ರಂಜೋಳ, ಮರೆಪ್ಪ ಅಲ್ಲಿಪುರ, ಚಂದ್ರಶೇಖರ ಧನ್ನೆಕರ್, ಆಕಾಶ ಮೇಂಗನ್, ಹಾಜಮ್ಮ, ಕಾಶಿಬಾಯಿ, ಶಾಲಿನಿ, ಸುಮಂಗಲಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.