ಕಲಬುರಗಿ: ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಶಕ್ತಿ ಹಾಗೂ ದುರ್ಗಾ ವಾಹಿನಿ ವತಿಯಿಂದ ನಡೆದ ದುರ್ಗಾ ದೇವಿಯ ಶೋಭಾಯಾತ್ರೆ ಗುರುವಾರ ಸಂಭ್ರಮದಿಂದ ಜರುಗಿತು.

ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಸುಲ್ತಾನಪುರ ರಸ್ತೆ, ಪೊಲೀಸ್ ಚೌಕ್, ಸೂಪರ್ ಮಾರ್ಕೆಟ್ ವೃತ್ತ, ಬ್ರಹ್ಮಪುರ ಪೊಲೀಸ್ ಠಾಣೆ ಮಾರ್ಗವಾಗಿ ಜಗತ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಿತು.

ಕೇಸರಿ ಧ್ವಜದೊಂದಿಗೆ ಅಲಂಕೃತವಾದ ಸಣ್ಣ ಟ್ರ್ಯಾಕ್ಟರ್ನಲ್ಲಿ ಸಿಂಹದ ಮೇಲೆ ಕುಳಿತ ದುರ್ಗಾ ದೇವಿಯ ಬೃಹತ್ ಮೂರ್ತಿಗೆ ನಗರೇಶ್ವರ ಶಾಲಾ ಮೈದಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶೋಭಯಾತ್ರೆಯ ಅಲಂಕೃತ ವಾಹನ ಮುಂದಕ್ಕೆ ಸಾಗುತ್ತಿದ್ದಂತೆ ಪಟಾಕಿ ಸಿಡಿಸಿದ ಭಕ್ತರು ಸಂಭ್ರಮಿಸಿದರು.

ಮಾತೃ ಶಕ್ತಿ, ದುರ್ಗಾ ವಾಹಿನಿ ಕಾರ್ಯಕರ್ತೆಯರು ಮತ್ತು ಪರಿಷತ್ತಿನ ಸಾವಿರಾರು ಕಾರ್ಯಕರ್ತರು ಕೇಸರಿ ಶಾಲು, ಕೇಸರಿ ಪೇಟ ಧರಿಸಿ, ಕೈಯಲ್ಲಿ ಕೇಸರಿ ಧ್ವಜ ಹಿಡಿದು ಮೆರವಣಿಗೆ ಉದ್ದಕ್ಕೂ ಘೋಷಣೆ ಕೂಗಿದರು. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಕೇಸರ ಧ್ವಜ ಕಟ್ಟಲಾಗಿತ್ತು. ಬಾಲಕಿಯರು ದುರ್ಗಾ ದೇವಿಯ ವೇಷದಲ್ಲಿ ಮಿಂಚಿದರು.

ಮಕ್ಕಳು ಭಕ್ತಿ, ದೇಶಭಕ್ತಿ ಗೀತೆಗಳಿಗೆ ಕೋಲಾಟ, ಹೆಜ್ಜೆಹಾಕಿದರು. ಕೆಲವರು ದುರ್ಗಾ ದೇವಿಯ ಸ್ಮರಣೆಯ ಭಜನೆ ಹಾಡುಗಳನ್ನು ಹಾಡಿದರು.

ವಾಹನ ದಟ್ಟಣೆ: ಆಯುಧ ಪೂಜೆಯ ಅಂಗವಾಗಿ ಸಾವಿರಾರು ಜನರು ಸೂಪರ್ ಮಾರ್ಕೆಟ್ನಲ್ಲಿ ಖರೀದಿಗಾಗಿ ನೆರೆದಿದ್ದರು. ಇದೇ ವೇಳೆ ಶೋಭಾಯಾತ್ರೆ ಸಾಗಿದ್ದರಿಂದ ಮಾರುಕಟ್ಟೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಕುಟುಂಬ ಸಮೇತ ಹಬ್ಬದ ಖರೀದಿಗೆ ಬಂದಿದ್ದವರು ವಾಹನದಟ್ಟಣೆಯ ನಡುವೆ ಸಿಲುಕಿ ಪರದಾಡಿದರು.

ಸಮಾವೇಶದಲ್ಲಿ ವಿಶ್ವ ಹಿಂದು ಪರಿಷತ್ ಮಹಾನಗರ ಜಿಲ್ಲಾ ಉಪಾಧ್ಯಕ್ಷೆ ಸುಮಂಗಲಾ ಚಕ್ರವರ್ತಿ, ಪ್ರಮುಖರಾದ ಮೇಘನಾ ಜಾಧವ್, ಜಯಶ್ರೀ ಮತ್ತಿಮಡು, ಪ್ರಿಯಾಂಕಾ ಪಾಟೀಲ, ಲಕ್ಷ್ಮಿ ಪಾಟೀಲ, ಪ್ರೇಮಲತಾ ಅಲ್ಲಮಪ್ರಭು ಪಾಟೀಲ, ಕಲ್ಪನಾ ಗುತ್ತೇದಾರ್, ಮೇಘಾ ಪಾಟೀಲ, ಭವ್ಯಶ್ರೀ ರಾಘವೇಂದ್ರ, ಸವಿತಾ ವಾಲೇಕರ್, ತುಳಸಮ್ಮ, ಜ್ಯೋತಿ ಆರ್. ಗುತ್ತೇದಾರ, ವಿದ್ಯಾರಾಣಿ ಭಟ್, ಮಾಲತಿ ಗುರಣ್ಣ, ಡಾ.ವೀಣಾ ನಾಗರಾಜ ಪಾಟೀಲ, ಅನಿತಾ ಸಡೆವಾಲ್, ಸಂಗೀತಾ ಪೂಜಾರಿ, ವನಿತಾ ಅಮೂಲ ಪತಂಗೆ, ಸುರೇಖಾ, ಸ್ವಪ್ನಾ ಕಲಬುರಗಿ, ಸರಸ್ವತಿ, ಗೌರಿ ಮುಕ್ಕಾ ಉಪಸ್ಥಿತರಿದ್ದರು.

‘ಅನ್ಯ ಧರ್ಮೀಯರು ನುಸುಳಿದ್ದಾರೆ’ ‘ಗರ್ಭಾ ನೃತ್ಯದ ಕೆಲ ಆಯೋಜಕರು ಸಂಯೋಜಕರು ಹಾಗೂ ನಿರ್ವಹಣೆ ಮಾಡುವವರಲ್ಲಿ ಅನ್ಯ ಧರ್ಮೀಯರು ನುಸುಳಿದ್ದಾರೆ. ಹಿಂದೂ ಯುವತಿಯರನ್ನು ಸೆಳೆಯಲು ಯತ್ನಿಸುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ರಾಷ್ಟ್ರೀಯ ದುರ್ಗಾವಾಹಿನಿ ಸಂಯೋಜಕಿ ಪ್ರಜ್ಞಾ ಪರಿಮಿತಾ ಮಹಾಲ್ ಹೇಳಿದರು. ಶೋಭಾಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು ‘ಗರ್ಭಾ ನೃತ್ಯದಿಂದ ಲವ್ ಜಿಹಾದ್ಗೆ ಅವಕಾಶ ನೀಡಬಾರದು. ಎಲ್ಲರೂ ಈ ಬಗ್ಗೆ ನಿಗಾ ಇರಿಸಬೇಕು’ ಎಂದರು. ‘ಧರ್ಮ ಮತ್ತು ಸಂಸ್ಕೃತಿ ಜತೆಗೆ ಮಾತೃಶಕ್ತಿಯಿಂದ ಮಾತ್ರ ಭಾರತ ವಿಶ್ವಗುರು ಆಗಲಿದೆ. 100 ಕೋಟಿ ಹಿಂದೂಗಳಿದ್ದರೂ ದೇಶದಲ್ಲಿ ಶಕ್ತಿ ಹೀನರಂತೆ ಆಗಿದ್ದೇವೆ. ಸಂಪದ್ಭರಿತ ಭಾರತವನ್ನು ಅವ್ಯಹತವಾಗಿ ಲೂಟಿ ಮಾಡಲಾಗಿದ್ದು ಭಾರತದ ವೈಭವ ಮರುಕಳಿಸಲು ಮಾತೃಶಕ್ತಿ ಶ್ರಮಿಸಬೇಕು’ ಎಂದು ಹೇಳಿದರು. ‘ಭವಿಷ್ಯದ ದುರ್ಗಾದೌಡ್ನಲ್ಲಿ ಪಾಲ್ಗೊಳ್ಳುವ ಮಹಿಳೆಯರು ಕೇಸರಿ ಧ್ವಜದೊಂದಿಗೆ ಶಸ್ತ್ರಗಳು ಹಿಡಿದು ಭಾಗವಹಿಸಬೇಕಾಗುತ್ತದೆ. ಗರ್ಭಾ ಕೋಲು ದಂಡವಾಗಲಿ ಸ್ವಯಂ ರಕ್ಷಣೆಗೆ ಶಸ್ತ್ರಾಭ್ಯಾಸ ಮಾಡಬೇಕು. ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿದಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒಡೆದು ಓಡಿಸುತ್ತಾರೆ. ಮಾತೆಯರು ಕುತಂತ್ರಿಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.