ಕಲಬುರ್ಗಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಮಂಜು ಕವಿದ ವಾತಾವರಣ ಇದ್ದುದರಿಂದ ನಗರಕ್ಕೆ ಬರಬೇಕಿದ್ದ ಅಲಯನ್ಸ್ ಏರ್ ಸಂಸ್ಥೆಯ ವಿಮಾನ ಸುಮಾರು ಐದು ಗಂಟೆ ತಡವಾಗಿ ಬಂತು.

ಮಂಗಳವಾರ ಅತಿಯಾದ ಮಂಜು ಹಾಗೂ ಮೋಡ ಕವಿದ ವಾತಾವರಣದಿಂದಾಗಿ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು.

ಬುಧವಾರ ಬೆಳಿಗ್ಗೆ ಮೈಸೂರಿನಿಂದ ಹೊರಟು ಬೆಂಗಳೂರಿಗೆ ಬರುವಾಗಲೇ ತಡವಾಗಿತ್ತು. ಬೆಂಗಳೂರಿನಿಂದಬೆಳಿಗ್ಗೆ 11.25ಕ್ಕೆ ಕಲಬುರ್ಗಿಗೆ ಬರಬೇಕಿದ್ದ 72 ಸೀಟುಗಳ ಪ್ರಯಾಣಿಕ ವಿಮಾನ ಮಧ್ಯಾಹ್ನ 3.30ರ ಸುಮಾರಿಗೆ ಬಂದಿಳಿಯಿತು.

‘ಕೆಲದಿನಗಳಿಂದ ಹವಾಮಾನದಲ್ಲಿ ಸಾಕಷ್ಟು ವೈಪರೀತ್ಯಗಳು ಇರುವುದರಿಂದ ಬೆಳಿಗ್ಗೆ ಹೊರಟು ಬರುವ ಅಲಯನ್ಸ್ ಏರ್ ವಿಮಾನ ಸಂಚಾರ ವಿಳಂಬವಾಗುತ್ತಿದೆ. ಮಂಗಳವಾರ ಬರಬೇಕಿದ್ದ ವಿಮಾನ ಕೊನೆಗಳಿಗೆಯಲ್ಲಿ ರದ್ದಾಗಲೂ ಅತಿಯಾದ ಮಂಜು ಕವಿದ ವಾತಾವರಣವೇ ಕಾರಣ’ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ತಿಳಿಸಿದರು.

ತನ್ನ ಮೊದಲ ಸೇವೆ ಆರಂಭಗೊಳಿಸಿದ್ದ ಡಿಸೆಂಬರ್ 27ರಂದು ಸಹ ಈ ವಿಮಾನ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಭೂಸ್ಪರ್ಶ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.