ಕಲಬುರಗಿ: ನಗರದಲ್ಲಿ ನಡೆದ ಸಭೆಯಲ್ಲಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಸಂಘಟನೆಯನ್ನು ಉದ್ಘಾಟಿಸಲಾಯಿತು.

ಸಂಘಟನೆ ಅಖಿಲ ಭಾರತ ಕಾರ್ಯಾಧ್ಯಕ್ಷ ಎಸ್. ನಂಬುರಾಜನ್ ಮಾತನಾಡಿ, ‘ಅಂಗವಿಕಲರ ಹಕ್ಕುಗಳ ಕಾಯ್ದೆ- 2016 ಅನ್ನು ಸಂಘಟನೆಯ ಸತತ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಜಾರಿ ಮಾಡಲು ಸಾಧ್ಯವಾಗಿದೆ. ಈ ಕಾಯ್ದೆಯು ಅಂಗವಿಕಲರ ಹಕ್ಕುಗಳನ್ನು ರಕ್ಷಿಸುತ್ತದೆ. ಅಂಗವಿಕಲರ ಶಿಕ್ಷಣ, ಉದ್ಯೋಗ, ಘನತೆಯ ಜೀವನಕ್ಕೆ ಒತ್ತು ನೀಡುತ್ತದೆ’ ಎಂದರು.

‘ಕಾಯ್ದೆ ಜಾರಿಗೆ ಬಂದು ಏಳು ವರ್ಷಗಳು ಕಳೆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಯ್ದೆಯನ್ನು ಅನುಷ್ಠಾನ ಗೊಳಿಸುತ್ತಿಲ್ಲ. ಅಂಗವಿಕಲರಿಗಾಗಿ ಉದ್ಯೋಗ ನೀತಿ ಬದಲಾಗಬೇಕಾಗಿದೆ. ಇದಕ್ಕಾಗಿ ಆಂದೋಲನ ನಡೆಸಬೇಕಾಗಿದೆ. ಈ ಹಿನ್ನಲೆಯಲ್ಲಿ ಅಂಗವಿಕಲರು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ’ ಎಂದು ಹೇಳಿದರು.

ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ‘ಅಂಗವಿಕಲರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕುಟುಂಬದ ಒಳಗೆ ಮತ್ತು ಹೊರಗೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಗವಿಕಲ ಮಹಿಳೆಯರು ಸಂಕಷ್ಟ, ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ನಿಮ್ಮ ಸಂಘಟನೆ, ಹೋರಾಟಕ್ಕೆ ನಮ್ಮ ಪಕ್ಷ ಬೆಂಬಲಿಸುತ್ತದೆ’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿದರು. ಸುಭಾಷ್ ಹೊಸಮನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಮಿತಿ ರಚಿಸಲಾಯಿತು. ಸುಭಾಷ್ ಹೊಸಮನಿ (ಜಿಲ್ಲಾ ಸಂಘಟನಾ ಸಂಚಾಲಕ), ಮೆಹಬೂಬ್‌ಬೀ, ಶಾಂತ, ಸೌಭಾಗ್ಯಮ್ಮ ಭೀಮಣ್ಣ (ಜಿಲ್ಲಾ ಸಹ ಸಂಘಟನಾ ಸಂಚಾಲಕರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.