ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಬಿಎನ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ

Published 30 ಜೂನ್ 2024, 6:33 IST
Last Updated 30 ಜೂನ್ 2024, 6:33 IST
ಅಕ್ಷರ ಗಾತ್ರ

ಕಲಬುರಗಿ: ತಾಲ್ಲೂಕಿನ ತಾವರಗೇರಾ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ವತಿಯಿಂದ ಕುಟುಂಬ ದತ್ತು ಕಾರ್ಯಕ್ರಮದ ಅಡಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಸ್ತ್ರೀ ರೋಗ, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು, ಎಲುಬು ಕೀಲು ಸೇರಿದಂತೆ ಚಿಕ್ಕ ಮಕ್ಕಳ ವಿಭಾಗಗಳು ಭಾಗವಹಿಸಿದ್ದವು.

ವಿದ್ಯಾರ್ಥಿಗಳು ಗ್ರಾಮದ ಜನರ ಮನೆಗೆ ತೆರಳಿ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿ ತಪಾಸಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.

ಉರ್ದು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೇ ಗ್ರಾಮಸ್ಥರು ತಪಾಸಣೆ ಮಾಡಿಸಿಕೊಂಡು ಉಚಿತ ಮಾತ್ರೆಗಳನ್ನು ಪಡೆದುಕೊಂಡರು. 

ತಾವರಿಗೇರಾದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ಮೆಡಿಕಲ್‌ ಡೀನ್ ಡಾ. ಸಿದ್ದೇಶ ಸಿರವಾರ ತಿಳಿಸಿದರು. ಎಲ್ಲ ರೋಗಿಗಗಳಿಗೆ ಕೆಬಿಎನ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಈ ಕಾರ್ಡನಿಂದ ಕುಟುಂಬ ಸದಸ್ಯರೆಲ್ಲರ ಆರೋಗ್ಯ ಪರೀಕ್ಷೆಗಳು, ವಾರ್ಡ್ ಚಾರ್ಜ್, ಆಪರೇಷನ್‌ಗೆ ಒಳಗಾದವರು ಶೇ 30ರಷ್ಟು ರಿಯಾಯತಿ ಪಡೆಬಹುದಾಗಿದೆ ಎಂದರು.

ಸುಮಾರು 175ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು.

ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಶಹನಾಜ್, ಡಾ.ಅಸ್ಮಾ, ಡಾ. ಆಯಿಷಾ, ಡಾ. ಆಕಾಶ, ಡಾ. ಮುಸ್ತಾಕ್, ಡಾ. ಸಯ್ಯದ್ ಅಲಿ, ಡಾ. ಶಿಲ್ಪಾ, ಡಾ. ಪದ್ಮಾ, ಡಾ. ಕೇದಾರಾನಾಥ, ಡಾ. ಶಿಫಾ ಹಾಗೂ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT