ಕಮಲಾಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ರಾಜ್ಯ ಪರಿಷತ್ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮಹಾಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಂದ್ರ ಕುಮಾರ ಗೆಲುವು ಸಾಧಿಸಿದ್ದಾರೆ.

ಒಟ್ಟು 26 ಮತಗಳಲ್ಲಿ ಮಹೇಂದ್ರಕುಮಾರ 20 ಮತ ಪಡೆದು ಗೆಲುವು ಸಾಧಿಸಿದರೆ ಕೇವಲ 6 ಮತ ಪಡೆದ ಪೀರಪ್ಪ ಹೋಗೊಂಡ ಪರಾಭವಗೊಂಡರು. ಈ ಚುನಾವಣೆಯಲ್ಲಿ ಸಂಪೂರ್ಣ ಪರಮೇಶ್ವರ ಓಕಳಿ ಪೆನಲ್ ವಿಜಯ ಪತಾಕೆ ಹಾರಿಸಿದೆ ಎಂದು ಸರ್ಕಾರಿ ನೌಕರರು ಅಭಿಪ್ರಾಯಪಟ್ಟರು.

ಫಲಿತಾಂಶ ಹೊರಬೀಳುತ್ತಿದ್ದಂತೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾಧಿಕಾರಿ ದಾಸಿಮತ್ತ ವಡ್ಡನಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಮೆಹೆಬೂಬ ಮಡಕಿ, ಸಾಬಯ್ಯ ಗುತ್ತೇದಾರ, ತಿಪ್ಪಣ್ಣ ಕಚೇರಿ, ಶಾಂತವೀರ ಮಂಠಾಳ, ಚಂದ್ರಶೇಖರ ಗೌಡಗೋಳ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.