ರಾಜಗೀರ್, ಬಿಹಾರ: ಹಾಲಿ ಚಾಂಪಿಯನ್ ಭಾರತ ತಂಡವು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನಾ ತಂಡಕ್ಕೆ ಸೋಲಿನ ಕಹಿ ಉಣಿಸಿತು.

ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 3–0ಯಿಂದ ಚೀನಾ ತಂಡವನ್ನು ಸದೆಬಡಿಯಿತು.

ಭಾರತ ತಂಡದ ಸಂಗಿತಾ ಕುಮಾರಿ (32ನೇ ನಿಮಿಷ) ಮತ್ತು ನಾಯಕಿ ಸಲೀಮಾ ಟೆಟೆ (37ನೇ ನಿ) ಅವರು ತಲಾ ಒಂದು ಫೀಲ್ಡ್ ಗೋಲು ಹೊಡೆದರು. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ದೀಪಿಕಾ (60ನೇ ನಿ) ಪಂದ್ಯದ ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು.

ವಿಶ್ವ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನದಲ್ಲಿರುವ ಚೀನಾ ವಿರುದ್ಧ ಜಯಿಸುವ ಮೂಲಕ ಸಲೀಮಾ ಬಳಗವು ಈ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಜಯಿಸಿ ಎಂಟು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೀನಾ ಎರಡನೇ ಸ್ಥಾನಕ್ಕೆ ಇಳಿಯಿತು. ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತವು ಜಪಾನ್ ವಿರುದ್ಧ ಆಡಲಿದೆ.

ರೌಂಡ್ ರಾಬಿನ್ ಲೀಗ್ನಲ್ಲಿ ಆರು ತಂಡಗಳಿದ್ದು ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಲಿವೆ.

ಬಲಿಷ್ಠ ಚೀನಾ ತಂಡದ ಎದುರಿನ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಆರಂಭದಿಂದಲೇ ಚುರುಕಾದ ಆಟವಾಡಿದರು. ಕೆಲವು ಪೆನಾಲ್ಟಿ ಕಾರ್ನರ್ಗಳಲ್ಲಿ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದರೂ ಎದುರಾಳಿಗಳಿಗೆ ಯಶಸ್ಸು ಸಿಗಲು ಬಿಡಲಿಲ್ಲ. ಭಾರತದ ರಕ್ಷಣಾ ಪಡೆ ಉತ್ತಮವಾಗಿ ಕಾರ್ಯನಿರ್ವಹಿಸಿತು.

ದಿನದ ಇನ್ನುಳಿದ ಪಂದ್ಯಗಳಲ್ಲಿ ಜಪಾನ್ 2–1ರಿಂದ ಮಲೇಷ್ಯಾ ವಿರುದ್ಧ; ದಕ್ಷಿಣ ಕೊರಿಯಾ 4–0ಯಿಂದ ಥಾಯ್ಲೆಂಡ್ ವಿರುದ್ಧ ಜಯಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.