ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಸ್ಕಾಂ | 91.01 ಕೋಟಿ ಯೂನಿಟ್ ವಿದ್ಯುತ್ ಬಳಕೆ

ಜೆಸ್ಕಾಂ: 20.69 ಲಕ್ಷ ಫಲಾನುಭವಿಗಳಿಗೆ ತಲುಪಿದ ‘ಗೃಹಜ್ಯೋತಿ’
Published 2 ಜುಲೈ 2024, 5:03 IST
Last Updated 2 ಜುಲೈ 2024, 5:03 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ನೀಡುವ ‘ಗೃಹಜ್ಯೋತಿ’ ಯೋಜನೆಯು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯಾಪ್ತಿಯಲ್ಲಿ 20.69 ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ತಲುಪಿದೆ.

‘ಗೃಹಜ್ಯೋತಿ’ ನೋಂದಣಿ ಪ್ರಕ್ರಿಯೆ ಶುರುವಾಗಿ ಜುಲೈ 18ಕ್ಕೆ ಒಂದು ವರ್ಷವಾಗಲಿದೆ. ಈ ಅವಧಿಯಲ್ಲಿ 20 ಲಕ್ಷಕ್ಕೂ ಅಧಿಕ ಮನೆಗಳ ವಾರಸುದಾರರಿಗೆ ವಿದ್ಯುತ್ ಶುಲ್ಕದ ಹೊರೆಯನ್ನು ತಪ್ಪಿಸಿದೆ. 2024ರ ಮೇ ಅಂತ್ಯಕ್ಕೆ 21.69 ಲಕ್ಷ ನೋಂದಣಿಯಾಗಿದ್ದು, 20.69 ಲಕ್ಷ ಫಲಾನುಭವಿಗಳಿದ್ದಾರೆ. ಫಲಾನುಭವಿಗಳು ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಬಳಸಿದರೂ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ‘ಗೃಹಜ್ಯೋತಿ’ ಅಡಿ ಮೇ ಅಂತ್ಯದವರೆಗೆ 20.69 ಲಕ್ಷ ಫಲಾನುಭವಿಗಳು 91.01 ಕೋಟಿ ಯೂನಿಟ್ ವಿದ್ಯುತ್ ಬಳಸಿದ್ದಾರೆ. ಇದರ ಒಟ್ಟು ವಿದ್ಯುತ್ ಬಿಲ್ ಮೊತ್ತ ₹ 853.41 ಕೋಟಿಯಷ್ಟಿದೆ.

ಏಳು ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ 5.43 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. 5.09 ಲಕ್ಷ ಫಲಾನುಭವಿಗಳಿದ್ದಾರೆ. ಯಾದಗಿರಿಯಲ್ಲಿ ಅತಿ ಕಡಿಮೆ 1.85 ಲಕ್ಷ ಫಲಾನುಭವಿಗಳಿದ್ದಾರೆ. 

‘ಪ್ರತಿ ತಿಂಗಳು ವಿದ್ಯುತ್‌ ಶುಲ್ಕ ಪಾವತಿಸುವುದು ಕಷ್ಟವಾಗುತ್ತಿತ್ತು. ಗೃಹಜ್ಯೋತಿ ಯೋಜನೆ ಬಳಿಕ ಶುಲ್ಕದ ಹೊರೆ ತಪ್ಪಿದೆ. ವಿದ್ಯುತ್ ಶುಲ್ಕದ ಹಣವನ್ನು ಮನೆ ನಿರ್ವಹಣೆ ಬಳಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಫಲಾನುಭವಿ ಶೋಭಾ.

‘ನಮ್ಮ ಮನೆಯಲ್ಲಿ ಪ್ರತಿ ತಿಂಗಳು ಸುಮಾರು ₹1,000 ವಿದ್ಯುತ್ ಬಿಲ್ ಬರುತ್ತಿತ್ತು. ಕಳೆದ ಒಂದು ವರ್ಷದಿಂದ ಕರೆಂಟ್ ಬಿಲ್ ಕಟ್ಟುತ್ತಿಲ್ಲ ಎಂಬುದು ಸಂತಸ ತಂದಿದೆ. ಬಿಲ್ ಕಟ್ಟಲು ಬಳಸುತ್ತಿದ್ದ ಹಣವನ್ನು ಈಗ ಬೇರೆ ಕಾರ್ಯಗಳಿಗೆ ಉಪಯೋಗವಾಗುತ್ತಿದೆ’ ಎಂದು ಫಲಾನುಭವಿ ಯಶೋಧಾ ಕುರ‍್ಣಿ ಹೇಳಿದರು.

ಗೃಹಜ್ಯೋತಿ ಯೋಜನೆಯು ಆರ್ಥಿಕವಾಗಿ ಹಿಂದುಳಿದವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ನ್ಯಾಯ ಕಲ್ಪಿಸುವ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ರವೀಂದ್ರ ಕರಲಿಂಗಣ್ಣವರ
ರವೀಂದ್ರ ಕರಲಿಂಗಣ್ಣವರ
ಗೃಹಜ್ಯೋತಿ
ಗೃಹಜ್ಯೋತಿ

ಗೃಹಜ್ಯೋತಿ ಯೋಜನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿ ಅರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಪೂರೈಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ

- ಕೆ.ಜೆ.ಜಾರ್ಜ್ ಇಂಧನ ಸಚಿವ

ರಾಜ್ಯ ಸರ್ಕಾರದ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜೆಸ್ಕಾಂ ಅಧಿಕಾರಿಗಳು ಸಫಲರಾಗಿದ್ದಾರೆ.

-ರವೀಂದ್ರ ಕರಲಿಂಗಣ್ಣವರ್ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ

ಜೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಬಳಕೆಯ ವಿವರ ಜಿಲ್ಲೆಗಳು;ಫಲಾನುಭವಿಗಳು;ಬಳಸಿದ ವಿದ್ಯುತ್; ಬಿಲ್‌ ಮೊತ್ತ ಬಳ್ಳಾರಿ;2.46;12.78;115.96 ಬೀದರ್ 3.33;14;136.29 ಕಲಬುರಗಿ 5.09;23.09;212.83 ಕೊಪ್ಪಳ;2.64;10.72;99.98 ರಾಯಚೂರ;2.90;12.78;122.05 ವಿಜಯನಗರ;2.38;10.81;98.60 ಯಾದಗಿರಿ;1.85;6.80;67.71 ಒಟ್ಟು;20;69;91.01;853.41 ಫಲಾನುಭವಿಗಳು– ಲಕ್ಷ ಬಳಸಿದ ವಿದ್ಯುತ್– ಯೂನಿಟ್‌ ಕೋಟಿಯಲ್ಲಿ ಬಿಲ್‌ ಮೊತ್ತ– ₹ ಕೋಟಿಯಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT