ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೌಡೇಶ್ವರ ಶಾಲೆಯಲ್ಲಿ ಗುರುವಂದನೆ ಸಂಭ್ರಮ

Published : 6 ಅಕ್ಟೋಬರ್ 2024, 16:12 IST
Last Updated : 6 ಅಕ್ಟೋಬರ್ 2024, 16:12 IST
ಫಾಲೋ ಮಾಡಿ
Comments

ಕಲಬುರಗಿ: ‘ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬಂತೆ ಗುರು-ಶಿಷ್ಯರ ಬಾಂಧವ್ಯ ವೃದ್ಧಿಯಾಗಬೇಕು’ ಎಂದು ಗುರುಪಾದಲಿಂಗೇಶ್ವರ ವಿಜ್ಞಾನ ಪಿಯು ಕಾಲೇಜಿನ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಹೇಳಿದರು. 

ನಗರದ ಬ್ರಹ್ಮಪುರ ಬಡಾವಣೆಯ ಚೌಡೇಶ್ವರ ಕಾಲೊನಿಯಲ್ಲಿ ಚೌಡೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಯ ಸಂಸ್ಥಾಪಕ ಮಲ್ಲೇಶಪ್ಪ ಶಕ್ತಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಸಿ ನೆಟ್ಟು ದೀಪ ಬೆಳಗಿಸುವ ಮೂಲಕ ಶಿಕ್ಷಕರಿಗೆ ವಂದನೆ ಸಲ್ಲಿಸಲಾಯಿತು. ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಹಳೆ ವಿದ್ಯಾರ್ಥಿ ಉಮಾಕಾಂತ ಅವರ ಹಾಡುಗಳು ಸಭಿಕರ ಗಮನ ಸೆಳದವು. 

ಸಂಸ್ಥೆಯ ಅಧ್ಯಕ್ಷೆ ಡಾ.ಇಂದಿರಾ ಶಕ್ತಿ ಅಧ್ಯಕ್ಷತೆ ವಹಿಸಿದ್ದರು.

ಹಳೆ ವಿದ್ಯಾರ್ಥಿಗಳಾದ ಶಕುಂತಲಾ ರ‍್ಯಾಕಾ, ಗುರುದೇವ ದೊಡ್ಡೆನ್ ನಿರೂಪಿಸಿದರು. ಅರವಿಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಮಹಾಗಾಂವ್ ಸ್ವಾಗತಿಸಿ, ಶರಣಗೌಡ ಬಿರಾದಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT