ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಲಕ್ಷ–ಲಕ್ಷ ಮತಗಳನ್ನು ಪಡೆದು ಮತಗಳಿಕೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ‘ನೋಟಾ’ (ಮೇಲಿನವರು ಯಾರೂ ಅಲ್ಲ) ಮತಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಕಣದಲ್ಲಿದ್ದ ಡಜನ್ (12 ಮಂದಿ) ಅಭ್ಯರ್ಥಿಗಳು ‘ನೋಟಾ’ ಕ್ಕಿಂತಲೂ ಕಡಿಮೆ ಮತ ಪಡೆದಿದ್ದಾರೆ.

ಕಣದಲ್ಲಿದ್ದ ಎಲ್ಲ 14 ಅಭ್ಯರ್ಥಿಗಳ ಪೈಕಿ ಯಾವುದೇ ಅಭ್ಯರ್ಥಿಗೂ ತಮ್ಮ ಸಹಮತವಿಲ್ಲವೆಂದು ಮತಕ್ಷೇತ್ರದ 8,429 ಮತದಾರರು ‘ನೋಟಾ’ ಬಟನ್ ಒತ್ತಿ ಸಾರಿ ಹೇಳಿದ್ದಾರೆ.

ಕೆಲವು ಅಭ್ಯರ್ಥಿಗಳಿಗೆ ಸ್ಥಳೀಯ ವರ್ಚಸ್ಸು ಹಾಗೂ ಪಕ್ಷದ ಹೆಸರು ಜೊತೆಯಲ್ಲಿದ್ದರೂ ‘ನೋಟಾ’ ಪೈಪೋಟಿ ಮೀರಲು ಸಾಧ್ಯವಾಗಿಲ್ಲ. ಜೊತೆಗೆ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ವಿಧಾನಸಭಾ ಕ್ಷೇತ್ರದಲ್ಲಿ ‘ನೋಟಾ’ ನಾಲ್ಕನೇ ಸ್ಥಾನ ಪಡೆದಿತ್ತು.

2024ರ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ, ಜೇವರ್ಗಿ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ‘ನೋಟಾ’ ಮತಗಳಿಕೆ ಕಾಂಗ್ರೆಸ್, ಬಿಜೆಪಿ ನಂತರದ ಮೂರನೇ ಸ್ಥಾನದಲ್ಲಿದೆ. ಗುರುಮಠಕಲ್, ಚಿತ್ತಾಪುರ ಹಾಗೂ ಸೇಡಂ ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಾ 4ನೇ ಸ್ಥಾನದಲ್ಲಿದೆ. ಹುಚ್ಚೇಶ್ವರ ವಠಾರ್ ಅವರು (ಒಟ್ಟು ಪಡೆದ ಮತ 7,888) ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಕ್ಕಿಂತಲೂ ಹೆಚ್ಚು ಮತ ಪಡೆದಿದ್ದಾರೆ. ಆದರೆ, ಇನ್ನುಳಿದ 5 ವಿಧಾನಸಭಾ ಕ್ಷೇತ್ರಗಳಲ್ಲಿ ‘ನೋಟಾ’ ಸವಾಲು ಮೀರುವಲ್ಲಿ ಸೋತಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆ ಯಲ್ಲಿ 13 ಅಂಚೆ ಮತಗಳು ಹಾಗೂ 8,416 ಇವಿಎಂ ಮತಗಳು ಸೇರಿ ನೋಟಾಗೆ ಒಟ್ಟು 8,429 ಮತಗಳು ಬಿದ್ದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಐದು ಅಂಚೆ ಮತಗಳು ಸೇರಿದಂತೆ 10,487 ಮತದಾರರು ನೋಟಾ ಗುಂಡಿ ಒತ್ತಿ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆಗ ಕಣದಲ್ಲಿದ್ದ 12 ಅಭ್ಯರ್ಥಿಗಳ ಪೈಕಿ 9 ಮಂದಿ ನೋಟಾಗೂ ಕಡಿಮೆ ಮತ ಪಡೆದಿದ್ದರು. ಅದಕ್ಕೂ ಹಿಂದಿನ 2014ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಮತ ಕ್ಷೇತ್ರದಲ್ಲಿ ಒಂದು ಅಂಚೆ ಮತ ಸೇರಿ 9,888 ಮತದಾರರು ನೋಟಾ ಆಯ್ಕೆ ಮಾಡಿಕೊಂಡಿದ್ದರು. ಆಗ ಕಣದಲ್ಲಿದ್ದ 8 ಅಭ್ಯರ್ಥಿಗಳಲ್ಲಿ ನಾಲ್ವರು ನೋಟಾಗಿಂತಲೂ ಕಮ್ಮಿ ಮತ ಗಳಿಸಿದ್ದರು.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,734 ಮಂದಿ ನೋಟಾ ಒತ್ತಿದ್ದರು. ಅದಕ್ಕೂ ಹಿಂದಿನ 2018ರ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10,009 ಮತದಾರರು ನೋಟಾಗೆ ಮತ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.