ಕಲಬುರಗಿ: ಕೆಎಸ್ಸಿಎ ರಾಯಚೂರು ವಲಯದ 19 ವರ್ಷದೊಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯ ಲೀಗ್ನ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಕಲಬುರಗಿ(ರೋಜರ್ ಬಿನ್ನಿ ಇಲೆವನ್) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಲೀಗ್ನ ಕೊನೆಯ ಪಂದ್ಯದಲ್ಲಿ ಕಲಬುರಗಿ ತಂಡವು, ವಿಜಯಪುರ(ಬಿ.ಎಸ್. ಚಂದ್ರಶೇಖರ್ ಇಲೆವನ್) ತಂಡವನ್ನು 195 ರನ್ಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಎತ್ತಿಹಿಡಿಯಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಲಬುರಗಿ ತಂಡವು, ಬ್ಯಾಟ್ಸ್ಮನ್ಗಳಾದ ಸುಹಾಸ್(52) ಹಾಗೂ ಸಿದ್ಧಾಂತ್(78) ತಲಾ ಅರ್ಧ ಶತಕಗಳ ನೆರವಿನಿಂದ 49.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 274 ರನ್ಗಳ ಬೃಹತ್ ಮೊತ್ತ ಪೇರಿಸಿತು. ವಿಜಯಪುರ ತಂಡದ ಜಗದೀಶ ಕೆ., ಅಭಿಲಾಷ ಆರ್., ಬಾಬುಗೌಡ ಪಿ., ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ವಿಜಯಪುರ ತಂಡವನ್ನು ಎದುರಾಳಿ ತಂಡದ ಬೌಲರ್ ವಿವೇಕ ಎನ್. ಸಿಂಹಸ್ವಪ್ನವಾಗಿ ಕಾಡಿದರು. ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿ, ಪೆವಿಲಿಯನ್ಗೆ ಸಾಲುಗಟ್ಟಿದರು. ಕೇವಲ 27 ಓವರ್ಗಳಲ್ಲಿ 79 ರನ್ ಗಳಿಸುಷ್ಟರಲ್ಲಿ ವಿಜಯಪುರ ತಂಡವು ಸಂಪೂರ್ಣವಾಗಿ ಕುಸಿಯಿತು. ಸಿದ್ಧಾರ್ಥ 2 ವಿಕೆಟ್ ಕಬಳಿಸಿದರೆ, ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ವಿವೇಕ್ ಎನ್. 6 ವಿಕೆಟ್ಗಳನ್ನು ಕಬಳಿಸಿ, ಗೆಲುವಿನ ರೂವಾರಿಯಾದರು.

ಕಲಬುರಗಿ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಬೀದರ್, ರಾಯಚೂರು, ಬಾಗಲಕೋಟೆ ತಂಡಗಳನ್ನು ಪರಾಭವಗೊಳಿಸಿತ್ತು.

ರಾಯಚೂರು ತಂಡಕ್ಕೆ ಗೆಲುವು: ನಗರದ ಎನ್.ವಿ. ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರಾಯಚೂರು ತಂಡವು, ಬಾಗಲಕೋಟೆ ತಂಡವನ್ನು 4 ವಿಕೆಟ್ಗಳ ಅಂತರದಿಂದ ಪರಾಭವಗೊಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಗಲಕೋಟೆ ತಂಡವು, 49.4 ಓವರ್ಗಳಲ್ಲಿ 164 ರನ್ ಗಳಿಸಲಷ್ಟೇ ಶಕ್ತವಾಯಿತು. ರಾಯಚೂರು ತಂಡದ ಬೌಲರ್ಗಳಾದ ರಾಹುಲ್ ಬೆಲ್ಲದ್ ಹಾಗೂ ಸರ್ವಜ್ಞ ನಾಯಕ ತಲಾ 3 ವಿಕೆಟ್ ಪಡೆದರು.

ಈ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ರಾಯಚೂರು ತಂಡವು, ಅನಿಕೇತ ರೆಡ್ಡಿ(102) ಅಜೇಯ ಶತಕ ಬಾರಿಸುವ ತಂಡವನ್ನು ಗೆಲುವಿನ ದಡ ತಲುಪಿಸಿದರು. ರಾಯಚೂರು ತಂಡವು 3 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.