ಚಿತ್ತಾಪುರ(ಕಲಬುರಗಿ): ಸ್ಥಳೀಯ ಪುರಸಭೆ ವಾರ್ಡ್ ಸಂಖ್ಯೆ 7ಕ್ಕೆ ಅ.28ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಚವ್ಹಾಣ ಅವರು 51 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

'ಸೋಮವಾರ ಬೆಳಿಗ್ಗೆ ನಡೆದ ಮತ ಎಣಿಕೆಯಲ್ಲಿ ಜಗದೀಶ ಚವ್ಹಾಣ ಅವರು 712 ಮತ್ತು ಬಿಜೆಪಿ ಅಭ್ಯರ್ಥಿ ಶಿವರಾಮ ಚವ್ಹಾಣ ಅವರು 661 ಮತಗಳು ಪಡೆದರು. ಜಗದೀಶ ಅವರ ಗೆಲುವಿನ ಅಂತರ 51 ಮತಗಳಿದ್ದು, ನೋಟಾಕ್ಕೆ 19 ಮತಗಳು ಚಲಾವಣೆಯಾಗಿವೆ. ಚುನಾವಣೆಯಲ್ಲಿ ಒಟ್ಟು 1,392 ಮತದಾರರು ತಮ್ಮ ಮತ ಚಲಾಯಿಸಿದ್ದರು' ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟು ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿತ್ತು. ಮತದಾರರ ನಾಡಿಮಿಡಿತ ಯಾರ ಪರವಾಗಿದೆ ಎನ್ನುವ ಲೆಕ್ಕಾಚಾರದ ಚರ್ಚೆ ನಡೆದಿತ್ತು.

ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಜಗದೀಶ ಅವರ ಬೆಂಬಲಿಗರುಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.