ಕಲಬುರಗಿ: ‘ಫೆಬ್ರುವರಿ ಅಂತ್ಯದೊಳಗೆ ನಗರದ ಎಲ್ಲೆಡೆ ಶೆ 60ರಷ್ಟು ಕನ್ನಡ ನಾಮಫಲಕಗಳು ಇರುವಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಪುನೀತರಾಜ ಸಿ. ಕವಡೆ, ‘ರಾಜ್ಯದಲ್ಲಿ ಎಲ್ಲ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಇರಲೇಬೇಕು ಎಂದು ಸುಗ್ರೀವಾಜ್ಞೆ ಹೊರಡಿಸಿದ್ದೀರಿ. ಈ ಅದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು, ತಹಶಿಲ್ದಾರ್‌ಗಳಿಗೆ ಸೂಚನೆ ನೀಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ವತಿಯಿಂದ ಬೆಂಗಳೂರಿನಲ್ಲಿ ಮಾಡಿದ ಹಾಗೆ ಮಸಿ ಬಳೆಯುವ, ಬೇರೆ ಬಾಷೆಗಳ ಫಲಕವನ್ನು ಒಡೆಯುವ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಈ ವೇಳೆ ವೇದಿಕೆಯ ಮುಖಂಡರಾದ ದೇವೀಂದ್ರಪ್ಪ ಪಾಟೀಲ, ಈರಣ್ಣ ಆಳಂದ, ಜರನಪ್ಪ ತಳವಾರ, ಯಲ್ಲಾಲಿಂಗ ಹಳ್ಯಾಳಕರ್, ಚಂದರ ಚವ್ಹಾಣ್, ನಿರ್ಮಲಾ ತಳವಾರ, ನಿಸಾರ್ ಅಹ್ಮದ್ ಖಾನ್, ಅಲಿ ಸಾಬ್ ಸೇರಿಂದತೆ ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.