ಹಲವು ವೈಶಿಷ್ಟ್ಯಗಳ ವೋಲ್ವೊ ಬಸ್
ನಿಗಮದ ವ್ಯಾಪ್ತಿಯಲ್ಲಿ ಇದೇ 28ರಿಂದ ಕಾರ್ಯಾಚರಣೆ ನಡೆಸುವ ವೋಲ್ವೊ ಮಲ್ಟಿ ಆ್ಯಕ್ಸೆಲ್ ಎ.ಸಿ. ಸ್ಲೀಪರ್ ಬಸ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅತ್ಯಾಧುನಿಕ ಬಿಎಸ್–6 ಎಂಜಿನ್ ಹೊಂದಿರುವ ಈ ಬಸ್‌ನಲ್ಲಿ 40 ಸ್ಲೀಪರ್ ಸೀಟುಗಳಿವೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಜೊತೆಗೆ ಲ್ಯಾಪ್‌ಟಾಪ್ ಬ್ಯಾಗ್ ಇರಿಸಲು ಪ್ರತ್ಯೇಕ ಜಾಗವನ್ನು ವಿನ್ಯಾಸಗೊಳಿಸಲಾಗಿದೆ. ಬೆಂಕಿ ನಂದಿಸುವ ಉಪಕರಣ ಜಿಪಿಎಸ್ ವ್ಯವಸ್ಥೆ ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ ಸ್ವಯಂ ಚಾಲಿತ ಹಿಂಬದಿ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಕೆಟ್ಟ ರಸ್ತೆಯಲ್ಲಿಯೂ ಬಸ್ ಅಲುಗಾಡುವುದನ್ನು ನಿಯಂತ್ರಿಸಲು ವಿಶಿಷ್ಟ ಸಸ್ಪೆನ್ಸರ್‌ಗಳನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಮಂದವಾದ ಬೆಡ್‌ಲೈಟ್ ಇರಲಿದೆ. ಪ್ರತಿ ದಿನ ರಾತ್ರಿ 10ಕ್ಕೆ ಸಿಂಧನೂರಿನಿಂದ ಹೊರಡುವ ಬಸ್ ಮರುದಿನ ಬೆಳಿಗ್ಗೆ 5.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ನಿತ್ಯ 10.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ. ಸಿಂಧನೂರಿನಿಂದ ಬೆಂಗಳೂರಿಗೆ ₹ 1250 ಪ್ರಯಾಣದರ ನಿಗದಿಪಡಿಸಲಾಗಿದೆ. ಶರಣರು ಬದುಕಿದ್ದ ಕಲ್ಯಾಣವನ್ನು ಬಿಂಬಿಸಲು ಬಸ್‌ಗೆ ಕಲ್ಯಾಣ ರಥ ಎಂದು ಹೆಸರಿಡಲಾಗಿದ್ದು ಹಂಪಿ ಕಲ್ಲಿನ ರಥದ ಚಿತ್ರವನ್ನು ಬಸ್ ಮೇಲೆ ಅಳವಡಿಸಲಾಗಿದೆ.