ಬಸವಕಲ್ಯಾಣ: ತಾಲ್ಲೂಕಿನ ಇಸ್ಲಾಂಪುರದ ಆರತಿ ಕನಾಟೆ (28) ಎಂಬುವರು ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ, ವಂಚನೆಗೆ ಒಳಗಾಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ನಗರದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಅವರು ಆನ್ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಹಣ ಹೂಡಿಕೆ ಮಾಡಿದ್ದಾರೆ. ಮನೆಯಲ್ಲೇ ಕೂತು ಉದ್ಯೋಗ ಮಾಡಲು ಹಣ ಹೂಡಿಕೆ ಮಾಡಿ ಎಂದ ಕಾರಣ ಅವರು ₹ 1 ಸಾವಿರದಿಂದ ₹2.50 ಲಕ್ಷದವರೆಗೆ ಆನ್ಲೈನ್ ಮೂಲಕ ಹಣ ಕಳುಹಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಂತರ ಅವರಿಗೆ ಇನ್ನೂ ₹82 ಸಾವಿರ ಕಳುಹಿಸಿದರೆ ಎಲ್ಲ ಹಣ ಹಿಂದಿರುಗಿಸಲಾಗುವುದು ಎಂಬ ಸಂದೇಶ ಬಂತಾದರೂ ಅವರಿಗೆ ಅಷ್ಟು ಹಣ ಹೊಂದಿಸಲು ಆಗಲಿಲ್ಲ. ವಂಚನೆಗೆ ಒಳಗಾದ ಮತ್ತು ಕುಟುಂಬದ ಗಮನಕ್ಕೆ ತಾರದೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಆತ್ಮಹತ್ಯೆಗೂ ಮುನ್ನ ಮನೆಯಲ್ಲಿ ಚಿನ್ನಾಭರಣ ತೆಗೆದಿಟ್ಟು, ಹಣ ಹೂಡಿಕೆ ಮಾಡಿದ ಏಜೆನ್ಸಿಯ ಹೆಸರಿರುವ ಚೀಟಿಯನ್ನು ಬರೆದಿದ್ದಾರೆ. ಚೀಟಿ ಸಿಕ್ಕ ಕೂಡಲೇ ತಂದೆ ಶಿವರಾಜ ಕನಾಟೆ ಅವರು ಬಾವಿ ಪರಿಶೀಲಿಸಿದಾಗ, ಶವ ಪತ್ತೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.