₹3.15 ಕೋಟಿ ಪ್ರೋತ್ಸಾಹ ಧನ ಬಾಕಿ
ಹಾಲು ಉತ್ಪಾದಕರಿಗೆ ಸರ್ಕಾರ ಲೀಟರ್ಗೆ ತಲಾ ₹5 ರಂತೆ ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಕಳೆದ 6 ತಿಂಗಳಿನಿಂದ ಒಂದು ರೂಪಾಯಿ ಸಹ ಬಿಡುಗಡೆಯಾಗಿಲ್ಲ. ಮೂರು ತಾಲ್ಲೂಕುಗಳ ರೈತರಿಗೆ ಪ್ರತಿ ತಿಂಗಳು ₹40ರಿಂದ 45 ಲಕ್ಷ ಸೇರಿ ಇಲ್ಲಿಯವರೆಗೆ ₹3.15 ಕೋಟಿ ಪ್ರೋತ್ಸಾಹಧನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಮಾತ್ರ ಕಳೆದ ಮಾರ್ಚ್ವರೆಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳಾ ಸಂಘಗಳಿಗೂ ಪ್ರೋತ್ಸಾಹ ಮೂರು ತಾಲ್ಲೂಕುಗಳ 138 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ 49 ಮಹಿಳಾ ಸಂಘಗಳಿವೆ. ಅಲ್ಲಿ ಮಹಿಳೆಯರದ್ದೇ ಸಿಂಹಪಾಲು. ಎನ್ಆರ್ಎಲ್ಎಂ ಯೋಜನೆ ಮೂಲಕ ರಾಸು ಖರೀಧಿಸಲು ಸದಸ್ಯೆಯರಿಗೆ ಬಡ್ಡಿ ರಹಿತ ಸುತ್ತುನಿಧಿ ನೀಡಲಾಗಿದ್ದು ಯಲಬುರ್ಗಾ ತಾಲ್ಲೂಕಿಗೆ ₹18.50 ಲಕ್ಷ ಕುಷ್ಟಗಿ ತಾಲ್ಲೂಕಿಗೆ ₹13 ಲಕ್ಷ ಹಾಗೂ ಕುಕನೂರು ತಾಲ್ಲೂಕಿಗೆ ₹10.05 ಲಕ್ಷದಂತೆ ಆರ್ಥಿಕ ನೆರವು ಒದಗಿಸಲಾಗಿದೆ.