ಶಹಾಬಾದ್: ಮೊಬೈಲ್ ರಿಚಾರ್ಜ್ ಮತ್ತು ಡಾಟಾ ಪ್ಯಾಕ್ ದರ ಹೆಚ್ಚಳ ವಿರೋಧಿಸಿ ನಗರದ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಯುವಜನರು ಶುಕ್ರವಾರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎಸ್ಯುಸಿಐ (ಸಿ) ಪಕ್ಷದ ಸದಸ್ಯೆ ಗುಂಡಮ್ಮ ಮಡಿವಾಳ ಮಾತನಾಡಿ, ‘ಕೋವಿಡನಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಆದರೆ, ತಮ್ಮ ಲಾಭಕ್ಕಾಗಿ ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರಿಚಾರ್ಜ್ ಹಾಗೂ ಡಾಟಾ ಪ್ಯಾಕ್ ದರ ಹೆಚ್ಚಿಸಿರುವುದು ಖಂಡನೀಯ’ ಎಂದರು.

‘ಫೋನ್ ಮತ್ತು ಅಂತರ್ಜಾಲ ಮೇಲಿನ ಅವಲಂಬನೆಯು ಅಸಾಧಾರಣವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರು ತಮ್ಮ ಜೀವನೋಪಾಯಕ್ಕಾಗಿ ಆನ್ಲೈನ್ ತರಗತಿಗಳು, ಆನ್ಲೈನ್ ಅಪ್ಲಿಕೇಶನ್, ವಹಿವಾಟು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಮೊಬೈಲ್ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂತಹ ಪರಸ್ಥಿತಿಯಲ್ಲಿ ಟೆಲಿಕಾಂ ಕಂಪನಿಗಳು ದರ ಹೆಚ್ಚಳ ಮಾಡಿರುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.

ಎಐಡಿವೈಒ ಕಾರ್ಯದರ್ಶಿ ರಮೇಶ ದೇವಕರ್ ಮಾತನಾಡಿದರು. ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದು ಚೌದ್ರಿ, ಸ್ಥಳೀಯ ಅಧ್ಯಕ್ಷ ರಘು ಪವಾರ, ತೇಜಸ್ ಇಬ್ರಾಹಿಂಪುರ, ರಾಜೇಂದ್ರ ಅತನೂರ, ತುಳಜರಾಮ ಎನ.ಕೆ, ತಿರುಪತಿ, ದೇವರಾಜ, ಶ್ರೀನಿವಾಸ್, ಶ್ರೀಶೈಲ್, ರಘು ಮಾನೆ, ಹಣಮಂತ, ಅಂಬ್ರೇಶ, ಕಿರಣ ಮಾನೆ, ಅಜಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.