ಚಿಂಚೋಳಿ (ಕಲಬುರಗಿ ಜಿಲ್ಲೆ): ಕಲಬುರಗಿ ಸಂಸದ ಡಾ. ಉಮೇಶ ಜಾಧವ ಅವರ ಹಿರಿಯ ಸಹೋದರಿ ಝಮಣಾಬಾಯಿ ಕೆ.ಟಿ. ರಾಠೋಡ (84) ಅವರು ಇಂದು ವಿಜಯಪುರದಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಮಾಜಿ ಸಚಿವ ಕೆ.ಟಿ. ರಾಠೋಡ ಅವರ ಪತ್ನಿ.

ಝಮಣಾಬಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ಗೋಪಾಲದೇವ ಜಾಧವ ಅವರು ಸಮಾನ ಮನಸ್ಕರೊಂದಿಗೆ ಸೇರಿ ಕಲಬುರಗಿಯಲ್ಲಿ ಲಂಬಾಣಿ ವಸತಿ ನಿಲಯ ತೆರೆದು ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹಿಸಲು ಸ್ವತಃ: ತಂದೆಯೇ ತನ್ನ ಮಗಳಾದ ಝಮಣಾಬಾಯಿಯನ್ನು ವಸತಿ ನಿಲಯಕ್ಕೆ ದಾಖಲಿಸಿ ಇತರ ಮಹಿಳೆಯರು ಶಿಕ್ಷಣ ಪಡೆಯಲು ಪ್ರೇರಣೆ ನೀಡಿದ್ದರು.

ಅಂತ್ಯಕ್ರಿಯೆ ಸೋಮವಾರ ವಿಜಯಪುರದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.