ಕಲಬುರಗಿ: ‘ಶಾಸಕನಾದ ಮೊದಲ ಅವಧಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಮೂರು ಬಾರಿ ಮಂತ್ರಿಗಿರಿಪಡೆದು, ಮುಖ್ಯಮಂತ್ರಿ ಸೂಚನೆಯನ್ನೂ ಕಡೆಗಣಿಸಿ ಜಿಲ್ಲಾ ಕೇಂದ್ರವನ್ನು ಬಿಟ್ಟು ಚಿಂಚೋಳಿಯಲ್ಲಿ ಜನಸ್ಪಂದನೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಸ್ಪೆಷಲ್ ಬೇಬಿ’ ಎಂದು ಸಂಸದ ಡಾ. ಉಮೇಶ ಜಾಧವ ವ್ಯಂಗ್ಯವಾಡಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಪಡೆದ ಪ್ರಿಯಾಂಕ್ ಅವರು ಎಂ.ಬಿ. ಪಾಟೀಲ ಅವರಿಗೆ ಸಿಕ್ಕಿದ್ದ ಐಟಿ, ಬಿಟಿ ಖಾತೆಯನ್ನೂ ಕಸಿದುಕೊಂಡರು. ಹಿರಿಯ ನಾಯಕರಾದ ಎಂ.ವೈ.ಪಾಟೀಲ ಮತ್ತು ರೇವುನಾಯಕ ಬೆಳಮಗಿ ಅವರನ್ನು ಎಡ–ಬಲಕ್ಕೆ ಕೂರಿಸಿಕೊಳ್ಳುವ ಪ್ರಿಯಾಂಕ್ ಅವರು ಸ್ಪೇಷಲ್ ಬೇಬಿ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಸಿ.ಎಂ. ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರದಲ್ಲಿ ಜನಸ್ಪಂದನೆ ನಡೆಸುವಂತೆ ಸೂಚಿಸಿದ್ದರು. ಅವರ ಮಾತನ್ನು ಕಡೆಗಣಿಸಿ, ಪ್ರಯಾಣಕ್ಕೆ ಅನುಕೂಲ ಆಗುವಂತಹ ಹೈದರಾಬಾದ್ಗೆ ಸಮೀಪದ ಚಿಂಚೋಳಿಯಲ್ಲಿ ಜನಸ್ಪಂದನೆ ನಡೆಸಿದ್ದು ಇದೇ ಸ್ಪೇಷಲ್ ಬೇಬಿ. ತನ್ನನ್ನು ತಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ನಾನು ಅವರನ್ನು ಸ್ಪೆಷಲ್ ಬೇಬಿ ಎಂದು ಸಂಬೋಧಿಸುತ್ತೇನೆ’ ಎಂದು ಸಮರ್ಥಿಸಿಕೊಂಡರು.

‘ಗುರಮಠಕಲ್ನಲ್ಲಿ ನಿಮ್ಮ ತಂದೆ 8 ಬಾರಿ, ಚಿತ್ತಾಪುರದಲ್ಲಿ ನೀವು ಮೂರು ಬಾರಿ ಗೆದ್ದಿದ್ದೀರಿ. ಆದರೆ, ಗುರಮಠಕಲ್ನಲ್ಲಿ ಸಿಬಿಎಸ್ಸಿ ಶಾಲೆ ಮಾಡದೆ ಯಲಹಂಕದಲ್ಲಿ ಮಾಡಿಕೊಂಡಿದ್ದೀರಿ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜ್ ತೆರೆದಿದ್ದೀರಿ. ನೀವು ಡಾಲರ್ಸ್ ಕಾಲೊನಿಯ ಬೆಂಗಳೂರಿನ ಮಂತ್ರಿ. ಬಡವರ ಕಷ್ಟ ಅರಿವಾಗಲ್ಲ’ ಎಂದು ಟೀಕಿಸಿದರು.

‘ಪಶ್ಚಿಮ ಬಂಗಾಳದ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರತಿಪಕ್ಷದವರ ಧ್ವನಿ ಅಡಗಿಸುವ ಸಂಸ್ಕೃತಿ ಶುರುವಾಗಿದೆ. ದೇವಾನಂದ ಕೊರಬಾ ಆತ್ಮಹತ್ಯೆಗೆ ನ್ಯಾಯ ಸಿಕ್ಕಿಲ್ಲ. ಪಾಲಿಕೆಯಲ್ಲಿ ಲಿಂಗಾಯತ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ. ಸೇಡಂನಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪ್ರಶ್ನೆ ಎತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಲ್ಲಿ ಕೊಲೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದೇನಾ ನಿಮ್ಮ ಸುಸಂಸ್ಕೃತ ಆಡಳಿತ’ ಎಂದು ಪ್ರಶ್ನಿಸಿದರು.

‘ವಿಮಾನ ನಿಲ್ದಾಣದಲ್ಲಿನ ಸೇವಾಲಾಲ್ ಮಹಾರಾಜರ ದೇವಸ್ಥಾನ ಒಡೆದು ಹಾಕಲಾಗಿತ್ತು. ಬಸವರಾಜ ಬೊಮ್ಮಾಯಿ ಅವರು ₹10 ಕೋಟಿ, 10 ಎಕರೆ ಜಮೀನು ಘೋಷಿಸಿದ್ದಾರೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ, ದೇವಸ್ಥಾನ ಕಟ್ಟಿಸಿ ಉದ್ಘಾಟಿಸಲಿ’ ಎಂದರು.

‘ದುರಹಂಕಾರ ತೋರುತ್ತಿರುವ ಪ್ರಿಯಾಂಕ್:

‘ಜಿಲ್ಲಾ ಕೆಡಿಪಿ ಸಭೆ ನಡೆಸುವ ಬದಲು ನ್ಯಾಯಾಲಯದ ಮೋರೆ ಹೋಗಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ದುರಹಂಕಾರ ಪ್ರದರ್ಶನ ತೋರಿದ್ದಾರೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

‘ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಎಲ್ಲ ಇಲಾಖೆಯ ಅಧಿಕಾರಿಗಳು, ನಾಮನಿರ್ದೇಶನ ಸದಸ್ಯರು ಹಾಗೂ ಮಾಧ್ಯಮದವರು ಪಾಲ್ಗೊಂಡು ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಬಗ್ಗೆ ಚರ್ಚಿಸಲಾಗುತ್ತದೆ. ಪ್ರಿಯಾಂಕ್ ಅವರು ಅಧಿಕಾರಿಗಳ ಜತೆಗೆ 40ಕ್ಕೂ ಹೆಚ್ಚು ಸಭೆ ನಡೆಸಿ ಯಾವ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂಬುದು ಸಾರ್ವಜನಿಕರಿಗೆ ಬಿಡಿ, ಅವರದೇ ಪಕ್ಷದ ಜನಪ್ರತಿನಿಧಿಗಳಿಗೂ ಗೊತ್ತಿಲ್ಲ’ ಎಂದು ಕುಟುಕಿದರು.

‘ಆಶ್ರಯ ಕಾಲೊನಿಯಲ್ಲಿ ಪಾಲಿಕೆಯಿಂದ ತೆರವು ಮಾಡಿದ ಸ್ಥಳಕ್ಕೆ ಕನಿಷ್ಠ ಭೇಟಿ ನೀಡುವ ಸೌಜನ್ಯವೂ ಸಚಿವರು ತೋರಿಸಿಲ್ಲ. ನೋಟಿಸ್ ನೀಡಿದ್ದಾಗಿ ಹೇಳುತ್ತಾರೆ. ಆದರೆ ಯಾವುದೇ ನೋಟಿಸ್ ನೀಡಿಲ್ಲ. ಅವರಿಗೆ ದಲಿತರ ಬಗ್ಗೆ ಕಾಳಜಿಯೂ ಇಲ್ಲ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಅವರ ಬಿಡುವಿಲ್ಲದ ಕಾರ್ಯದಿಂದ ಅ.27ರಂದು ನಡೆಯಬೇಕಿದ್ದ ದಿಶಾ ಸಭೆ ಮತ್ತೆ ಮುಂದೂಡಿಕೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಪಾಲಿಕೆ ಮಾಜಿ ಸದಸ್ಯ ವಿಠಲ ಜಾಧವ, ಸೇವಂತಿ ಬಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.