ಕಲಬುರಗಿ: ‘ನಮ್ಮ ಯಾತ್ರಿ’ ಆ್ಯಪ್ ಆಧಾರಿತ ಆಟೊ ಸೇವೆಗೆ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಚೆಗೆ ಚಾಲನೆ ನೀಡಿದರು.

ಜಸ್ಪೇ ಟೆಕ್ನಾಲಜಿಸ್ ಕಂಪನಿಯು ‘ನಮ್ಮ ಯಾತ್ರಿ’ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ತಂತ್ರಾಂಶವೂ ಒಳಗೊಂಡಿದೆ. ಇನ್ನು ಮುಂದೆ ನಗರದ ಸಾರ್ವಜನಿಕರು ಆಟೊ ಸೇವೆಯನ್ನು ಆ್ಯಪ್ ಮೂಲಕ ಬುಕ್ ಮಾಡಿ ಬಳಕೆ ಮಾಡಿಕೊಳ್ಳಬಹುದು.

ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್ ಅನ್ನು ಪ್ರಯಾಣಿಕರು ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ಆಟೊ ಚಾಲಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.

‘ನಗರದ ಆಟೊ ಚಾಲಕರ ಬೇಡಿಕೆಗಳನ್ನು ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ. ಚಾಲಕರಿಗೆ ಮನೆಗಳನ್ನು ಕೊಡಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಫೌಜಿಯಾ ತರನ್ನುಮ್ ಅವರು ಮಾತನಾಡಿ, ‘ನಮ್ಮ ಯಾತ್ರಿ ತಂಡದವರು ತಮಕೂರಿನಿಂದ ಬಂದು ಎರಡೂವರೆ ತಿಂಗಳಿಂದ ಆ್ಯಪ್ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಮುತುವರ್ಜಿಯಿಂದಾಗಿ ಕಲಬುರಗಿಯಲ್ಲಿ ಚಾಲನೆಗೊಂಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದರು.

‘ಆಟೊ ಚಾಲಕರು ಹೊಸತನವನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿರುವುದು ಅವರಲ್ಲಿನ ಕಾರ್ಯ ವೈಖರಿ ಎತ್ತಿ ತೋರಿಸುತ್ತದೆ. ಪ್ರಯಾಣಿಕರು ಸಹ ಈ ಆ್ಯಪ್ ಬಳಸುವ ಮೂಲಕ ಆಟೊ ಚಾಲಕರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಇದುವರೆಗೂ ನಗರದಲ್ಲಿ 900 ಚಾಲಕರು ನಮ್ಮ ಯಾತ್ರಿ ಆ್ಯಪ್ನಲ್ಲಿ ಲಾಗ್ಇನ್ ಆಗಿದ್ದಾರೆ. ಸುಮಾರು 5,500 ಟ್ರಿಪ್ಗಳಿಂದ ₹ 9 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾರೆ ಎಂದು ಆಟೊ ಚಾಲಕರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.