ಕಲಬುರ್ಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿರುವ ಡಿಜಿಟಲ್ ತಾರಾಲಯ
2023–24ರ ಏಪ್ರಿಲ್‌ನಲ್ಲಿ 7,863, ಮೇನಲ್ಲಿ 10,891, ಜೂನ್‌ನಲ್ಲಿ 9,003 ಮಂದಿ ಭೇಟಿ 2024–25ರ ಏಪ್ರಿಲ್‌ನಲ್ಲಿ 6,886, ಮೇನಲ್ಲಿ 9,966, ಜೂನ್‌ನಲ್ಲಿ 6,192 ವಿಜ್ಞಾನಾಸಕ್ತರಿಂದ ವೀಕ್ಷಣೆ
ಇನ್ನಷ್ಟು ಹೊಸ ಯೋಜನೆ ಶೀಘ್ರ?
‘ವಿಜ್ಞಾನ ಕೇಂದ್ರದ ಉದ್ಯಾನದಲ್ಲಿ ಶೀಘ್ರವೇ ವಿಜ್ಞಾನದ 10 ಹೊಸ ಮಾದರಿಗಳ ಅಳವಡಿಕೆ ನಡೆಯಲಿದೆ. ಜೊತೆಗೆ ಇಡೀ ವಿಜ್ಞಾನ ಕೇಂದ್ರಕ್ಕೆ ಬಣ್ಣ ಬಳಿಯಲು ಉದ್ದೇಶಿಸಲಾಗಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮಾನವ ಜೀವಶಾಸ್ತ್ರ ಗ್ಯಾಲರಿ ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಈಗಿರುವ ಎಲೆಕ್ಟ್ರಾನಿಕ್ಸ್ ಗ್ಯಾಲರಿಯನ್ನು ನವೀಕರಿಸಲಾಗುವುದು. ಅಲ್ಲಿ ಫ್ರಂಟರ್ಸ್ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ ಗ್ಯಾಲರಿ ನಿರ್ಮಿಸುವ ಉದ್ದೇಶವಿದೆ. ಇದೆಲ್ಲಕ್ಕೂ ಒಂದಿಷ್ಟು ಹಣ ಬಿಡುಗಡೆಯಾಗಿದೆ’ ಎನ್ನುತ್ತಾರೆ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿ ಕೆ.ಎಂ.ಸುನೀಲ್.
ವಿಜ್ಞಾನ ಕೇಂದ್ರದಲ್ಲಿ ಏನೇನಿದೆ?
ವಿಜ್ಞಾನ ಕೇಂದ್ರದಲ್ಲಿ ಗಣಿತ ಜನಪ್ರಿಯ ವಿಜ್ಞಾನ ವಿನೋದ ವಿಜ್ಞಾನ ಎಲೆಕ್ಟ್ರಾನಿಕ್ ಗ್ಯಾಲರಿಗಳಿವೆ. ಇವುಗಳಲ್ಲದೇ ಎಲೆಕ್ಟ್ರಾನಿಕ್ ಗ್ಯಾಲರಿ 3ಡಿ ಥಿಯೇಟರ್ ಮಿರರ್ ಮೇಜ್ ಇದೆ. ವಿಜ್ಞಾನ ಕೇಂದ್ರ ಆವರಣದಲ್ಲಿ ಡಿಜಿಟಲ್ ತಾರಾಲಯವಿದ್ದು ಹಿಂಭಾಗದಲ್ಲಿ ಡೈನೋಸಾರ್ ಪಾರ್ಕ್ ಇದೆ. ಕೇಂದ್ರದ ಸಮೀಪದ ಯಲ್ಲಮ್ಮ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ವಿಜ್ಞಾನ ಪಾರ್ಕ್‌ಕೂಡ ಇದೆ. ಶತಮಾನದ ಹಿಂದೆ ಬಳಕೆಯಲ್ಲಿದ್ದ ಉಗಿಬಂಡಿ ಎಂಜಿನ್ ಹಾಗೂ ಎಚ್‌ಎಎಲ್ ನಿರ್ಮಿತ ಹಳೆಯ ತರಬೇತಿ ವಿಮಾನ ‘ಕಿರಣ್ ಏರ್‌ಕ್ರಾಫ್ಟ್ ಯು–809’ ವಿಜ್ಞಾನ ಕೇಂದ್ರದ ಆಕರ್ಷಣೆಗಳಲ್ಲೊಂದು.