ಚಿತ್ತಾಪುರ: ರೈತರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಮಂಡಳಿ ಎಂದು ನಮೂದಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕಿನ ತೆಂಗಳಿ ಕ್ರಾಸ್ನಲ್ಲಿ ರಾಜ್ಯ ಹೆದ್ದಾರಿ ಸಂಚಾರ ತಡೆದು ‘ವಕ್ಫ್ ಹಠಾವೊ ಕಿಸಾನ್ ಬಚಾವೊ’ ಪ್ರತಿಭಟನೆ ನಡೆಸಿದರು.

ರೈತರ ಪಹಣಿ ಪತ್ರಿಕೆಯಲ್ಲಿ ನಮೂದಿಸಿರುವ ವಕ್ಫ್ ಮಂಡಳಿ ಹೆಸರು ತೆಗೆಯಬೇಕು. ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರಿಗೆ ತೊಂದರೆ ಮಾಡುತ್ತಿದೆ. ವಕ್ಫ್ ಹೆಸರು ತೆಗೆಯುವವರೆಗೂ ರೈತ ಸಂಘಟನೆಗಳು ನಿರಂತರ ಹೋರಾಟ ನಡೆಸಲಿವೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿದರು.

‘ರೈತರ ಜಮೀನುಗಳಲ್ಲಿ ನಮೂದಿಸಿರುವ ವಕ್ಫ್ ಮಂಡಳಿ ಹೆಸರು ತೆಗೆಯುವಂತೆ ಜಿಲ್ಲೆಯಾದ್ಯಂತ ಎಲ್ಲಾ ತಹಶೀಲ್ದಾರ್ಗಳಿಗೆಮನವಿ ಸಲ್ಲಿಸಿದರೂ ಈವರೆಗೂ ಆ ಕೆಲಸವನ್ನು ಯಾವ ಅಧಿಕಾರಿಗಳು ಮಾಡಿಲ್ಲ. ಪಹಣಿಯಲ್ಲಿ ವಕ್ಫ್ ಹೆಸರು ಬಂದಾಗಿನಿಂದ ರೈತರು ತೀವ್ರ ಚಿಂತೆಗೀಡಾಗಿದ್ದಾರೆ. ನೋಟಿಸ್ ವಾಪಾಸ್ ಪಡೆಯುವುದು ಮುಖ್ಯವಲ್ಲ. ಪಹಣಿ ಪತ್ರಿಕೆಗಳಲ್ಲಿ ವಕ್ಫ್ ಹೆಸರು ತೆಗೆದು ಹಾಕುವುದು ಮುಖ್ಯ. ಆ ಕೆಲಸ ಸರ್ಕಾರ ಮಾಡುತ್ತಿಲ್ಲ’ ಎಂದು ಪ್ರತಿಭಟನೆಕಾರರು ಆರೋಪಿಸಿದರು.

ರಾಜ್ಯ ಹೆದ್ದಾರಿಯ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಹೊತ್ತು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಸೇಡಂ ಮತ್ತು ಕಲಬುರಗಿ ಕಡೆಗಿನ ರಸ್ತೆಯಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತಿದ್ದವು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ್ ಅವರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠಲ್ ಮಾಕಾ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ, ತಾಲ್ಲೂಕು ಅಧ್ಯಕ್ಷ ಪರಮೇಶ್ವರ ಮತ್ತಿಮೂಡ, ಉಪಾಧ್ಯಕ್ಷ ಮಕ್ಬೂಲ್ ಪಟೇಲ್, ಮುಖಂಡ ಜಗದೀಶ ಸಾಗರ, ಶಾಹಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಯೋಗಿ ಪೂಜಾರಿ, ಚಿಂಚೋಳಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಮರೆಪ್ಪ ನಿಡಗುಂದಾ, ಸೇಡಂ ತಾಲ್ಲೂಕು ಅಧ್ಯಕ್ಷ ಸದಾಶಿವ ಸೇರಿದಂತೆ ರೈತರು, ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಶಹಾಬಾದ್ ಪಿಐ ನಟರಾಜ ಲಾಡೆ, ಮಾಡಬೂಳ ಪಿಎಸ್ಐ ಚೇತನ ಪೂಜಾರಿ ಬಂದೋಬಸ್ತ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.