ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಪ್ರೇರಣೋಪನ್ಯಾಸ ಮತ್ತು ನ್ಯಾ.ಶಿವರಾಜ ಪಾಟೀಲ ಅವರ ಮುಂಜಾವಿಗೊಂದು ನುಡಿಕಿರಣ–365 ನುಡಿಮುತ್ತುಗಳ ಚಿಂತನ–ಮಂಥನ ಕಾರ್ಯಕ್ರಮ ನಡೆಯಿತು.

ಆಕಾಶವಾಣಿ ಕಲಾವಿದ ಫಕಿರೇಶ್ ಕಣವಿ ಹಾಗೂ ಸಂಗೀತ ನಿರ್ದೇಶಕ ಕುಮಾರ ಕಣವಿ, ಮಾಲಾಶ್ರೀ ಕಣವಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ ಉದ್ಘಾಟಿಸಿದರು.

ಸಂಸ್ಥೆಯ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ ಮಾತನಾಡಿ, ’ಸಂಗೀತಕ್ಕೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ. ಸಂಗೀತ ಸುಪ್ತ ಮನಸ್ಸು ಮತ್ತು ಭಾವನೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ನೆನಪಿನ ಶಕ್ತಿ ವೃದ್ಧಿಯಾಗುತ್ತದೆ’ ಎಂದರು.

ನ್ಯಾ.ಶಿವರಾಜ ಪಾಟೀಲರ ಅನುಭಾವದ ನುಡಿಗಳಾದ ‘ಮುಂಜಾವಿಗೊಂದು ನುಡಿಕಿರಣ’ ಉಕ್ತಿಗಳಿಂದ ಮಾನಸಿಕ ಸ್ಥಿರತೆ ಹೆಚ್ಚಾಗಿ, ಮನಸ್ಸಿಗೆ ಸ್ಫೂರ್ತಿ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಕಣವಿ ತಬಲಾ, ಸುಧೀಂದ್ರ ಕುಲಕರ್ಣಿ ತಾಳ, ನಾರಾಯಣ ವಿ.ಎ. ವಯಲಿನ್ ನುಡಿಸಿದರು. ಗುರುರಾಜ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾವತಿ ಪಾಟೀಲ ನಿರೂಪಿಸಿದರು. ಸೃಜಲ್ಯ ಪ್ರಾರ್ಥಿಸಿದರು.

ಸಂಸ್ಥೆ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ, ಅಭಿಷೇಕ ಪಾಟೀಲ, ಸಂಗೀತಾ ಪಾಟೀಲ, ಪ್ರಾಂಶುಪಾಲರಾದ ಎಂ.ಸಿ.ಕಿರೇದಳ್ಳಿ, ವಿನುತಾ ಆರ್.ಬಿ., ಉಪ ಪ್ರಾಂಶುಪಾಲ ಪ್ರಶಾಂತ ಕುಲಕರ್ಣಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಭುಗೌಡ ಸಿದ್ಧಾರೆಡ್ಡಿ, ವಿಜಯಕುಮಾರ ನಾಲವಾರ, ಕರುಣೇಶ್ ಹಿರೇಮಠ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.