ಕಲಬುರ್ಗಿ: ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಸೃಜನಾತ್ಮಕತೆ, ವೈಜ್ಞಾನಿಕ ಮನೋಭಾವ, ಕೌಶಲ ಅಭಿವೃದ್ಧಿ ಹೊರಹೊಮ್ಮುತ್ತದೆ. ಅಲ್ಲದೇ ಇಂತಹ ವಿಜ್ಞಾನಕ್ಕೆ ಸಂಬಂಧಿಸಿದ ನೂತನ ಮಾದರಿಗಳನ್ನು ಮಕ್ಕಳು ಮಾಡುವುದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜಿಇಟಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜ ಮಾಕಲ್ ಹೇಳಿದರು.

ನಗರದ ಗೋದುತಾಯಿ ನಗರದಲ್ಲಿರುವ ಮದರ್ ಥೆರೆಸಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ ಮಾತನಾಡಿ, ಇಂತಹ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಿಂದ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ, ಹಾಗೂ ಮಕ್ಕಳ ಸುಪ್ತವಾದ ಪ್ರತಿಭೆ ಅರಳುತ್ತದೆ ಅಲ್ಲದೆ ಸಹಜವಾಗಿ ವೀಕ್ಷಣೆ ಕಲೆ ಬೆಳಯುತ್ತದೆ ಎಂದರು.

ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸ್ತು ಪ್ರದರ್ಶನದಲ್ಲಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಐತಿಹಾಸಿಕ ಮತ್ತು ಭೌಗೋಳಿಕ ಹಾಗೂ ವೈಜ್ಞಾನಿಕ ಮಾದರಿಗಳು ಇದ್ದವು. ಈ ವಸ್ತು ಪ್ರದರ್ಶನ ನೋಡಲು ಬೇರೆ ಬೇರೆ ಶಾಲೆಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು, ಸಾರ್ವಜನಿಕರು ಆಗಮಿಸಿ ಮಾದರಿಗಳನ್ನು ವೀಕ್ಷಿಸಿದರು.

ಮುಖ್ಯ ಶಿಕ್ಷಕ ನಾಗೇಂದ್ರ ಬಡಿಗೇರ, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.