ಕಲಬುರಗಿ: ‘ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪಠ್ಯದ ಜತೆಗೆ ಕೃಷಿ, ವಿಜ್ಞಾನದಂಥ ಚಟುವಟಿಕೆಗಳಲ್ಲಿ ತೊಡಗಿಸಿ, ಜ್ಞಾನ ನೀಡಬೇಕು. ಇದರಿಂದ ಮೌಲ್ಯಗಳು ಬೆಳೆಯುವ ಜತೆಗೆ ಕೌಶಲವೂ ವೃದ್ಧಿಯಾಗುತ್ತದೆ’ ಎಂದು ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ನುಡಿದರು.

ನಗರದ ಉದನೂರು ರಸ್ತೆ ಅಪ್ಪಾಜಿ ಗುರುಕುಲ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ ಉದನೂರು ಮಾತನಾಡಿದರು. ಬಸಯ್ಯ ಮಠಪತಿ, ಶರಣರಾಜ ಚಪ್ಪರಬಂಧಿ, ಶ್ರೀಶೈಲ ನಾಗರಾಳ, ಲಾಲಅಹ್ಮದ್, ಸಂಸ್ಥೆಯ ಅಧ್ಯಕ್ಷೆ ಭಾಗಮ್ಮ ಉದನೂರ, ಆಡಳಿತ ಅಧಿಕಾರಿ ಗುರು ಸಾಲಿಮಠ, ಬೋಧಕರಾದ ಅಭಿಲಾಷಾ, ಶರಣಯ್ಯ ಸ್ವಾಮಿ, ಲತಾ, ಕಾವ್ಯ, ಶಾಂತಾ, ಜ್ಯೋತಿ, ಭಾಗ್ಯಶ್ರೀ, ಮಾಲಾಶ್ರೀ ಇದ್ದರು. ಶಿಕ್ಷಕಿ ಸ್ವಾತಿ ನಿರೂಪಿಸಿದರು. ಶಿಕ್ಷಕಿ ನತಾಶಾ ಸ್ವಾಗತಿಸಿದರು. ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.