ಕಲಬುರಗಿ: ನಗರದಿಂದ ದಾವಣಗೆರೆ ಹಾಗೂ ಶಿವಮೊಗ್ಗಕ್ಕೆ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಾನ್ ಎಸಿ ಸ್ಲೀಪರ್ ಕೋಚ್ ಬಸ್ ಸಂಚಾರಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಗುರುವಾರ ಹಸಿರು ನಿಶಾನೆ ತೋರಿದರು.

ಕಲಬುರಗಿಯಿಂದ ನಿತ್ಯ ರಾತ್ರಿ 8 ಗಂಟೆಗೆ ಹೊರಡುವ ಬಸ್ಸು ಮರುದಿನ ಬೆಳಗ್ಗೆ 9 ಗಂಟೆಯೊಳಗೆ ದಾವಣಗೆರೆ ತಲುಪಲಿದೆ. ಇನ್ನು ಸಾಯಂಕಾಲ 6.30 ಕ್ಕೆ ಹೊರಡುವ ಬಸ್ಸು ಮರುದಿನ ಬೆಳಗಿನ ಜಾವ ಶಿವಮೊಗ್ಗ ತಲುಪಲಿದೆ. ಪ್ರಯಾಣಿಕರು ಈ ಹೊಸ ಬಸ್ಗಳ ಸೇವೆಯನ್ನು ಬಳಸಿಕೊಳ್ಳಲಿ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಶುಭಹಾರೈಸಿದರು. ತಾವೇ ಬಸ್ ಹತ್ತಿ ಒಳಗೆ ಪ್ರಯಾಣಿಕರಿಗೆ ನೀಡಲಾಗಿರುವ ಸವಲತ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.